ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ 10 ವರ್ಷಗಳ ಬಳಿಕ 2015–16ನೇ ಹಣಕಾಸು ವರ್ಷದಲ್ಲಿ ₹105 ಕೋಟಿಗಳಷ್ಟು ಕಾರ್ಯಾಚರಣೆ ಲಾಭ ಗಳಿಸಿದೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ 10 ವರ್ಷಗಳ ಬಳಿಕ 2015–16ನೇ ಹಣಕಾಸು ವರ್ಷದಲ್ಲಿ ₹105 ಕೋಟಿಗಳಷ್ಟು ಕಾರ್ಯಾಚರಣೆ ಲಾಭ ಗಳಿಸಿದೆ.
ಇಂಧನ ವೆಚ್ಚ ತಗ್ಗಿರುವುದು ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದೇ ಕಾರ್ಯಾಚರಣೆ ಲಾಭ ಗಳಿಸಲು ಕಾರಣ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ನಷ್ಟದಿಂದ ಹೊರಬರುವ ಪ್ರಯತ್ನದಲ್ಲಿರುವ ಸಂಸ್ಥೆಯು 2014–15ರಲ್ಲಿ ₹2,635 ಕೋಟಿಗಳಷ್ಟು ಕಾರ್ಯಾಚರಣಾ ನಷ್ಟ ಅನುಭವಿಸಿತ್ತು.
ಇಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ 2015–16ನೇ ಆರ್ಥಿಕ ವರ್ಷದ ಸಾಧನೆಯನ್ನು ಪ್ರಕಟಿಸಲಾಯಿತು ಎಂದು ಮೂಲಗಳು ತಿಳಿಸಿವೆ. 2007ರಲ್ಲಿ ಏರ್ ಇಂಡಿಯಾದೊಂದಿಗೆ ಇಂಡಿಯನ್ ಏರ್‌ಲೈನ್ಸ್ ವಿಲೀನವಾದ ಬಳಿಕ ಸಂಸ್ಥೆಯು ಲಾಭ ಗಳಿಸಲು ಸಾಧ್ಯವಾಗಿರಲಿಲ್ಲ.