ಕ್ರೀಡೆ

ಕ್ಯಾಚ್ ವೇಳೆ ನೆಲಕ್ಕೆ ತಾಗಿದ ಚೆಂಡು, ನಾಟೌಟ್ ಎಂದು ಹೇಳಿದ ಕೆಎಲ್ ರಾಹುಲ್

Pinterest LinkedIn Tumblr


ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲರಾದರೂ ಕನ್ನಡಿಗ ಕೆಎಲ್ ರಾಹುಲ್ ಆಸಿಸ್ ಕ್ರೀಡಾಭಿಮಾನಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಹೌದು.. ಪ್ರಸ್ತುತ ಸಾಗುತ್ತರುವ ಆಸ್ಟ್ರೇಲಿಯಾ ಸರಣಿಯಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯವನ್ನು ಅನುಭಿಸಿರಬಹುದು. ಇದರಿಂದ ವ್ಯಾಪಕ ಟೀಕೆಗೆ ಒಳಗಾಗಿರಬಹುದು. ಆದರೆ ಕ್ರಿಕೆಟ್ ವಿಚಾರದಲ್ಲಿ ರಾಹುಲ್ ತಮ್ಮ ಕ್ರೀಡಾಸ್ಪೂರ್ತಿ ತೋರಿ ಎಲ್ಲ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಮೂರನೇ ದಿನದಾಟದಲ್ಲಿ ಭಾರತದ ಫೀಲ್ಡಿಂಗ್ ವೇಳೆ ರವೀಂದ್ರ ಜಡೇಜಾ ಎಸೆದ 14ನೇ ಓವರ್‌ನಲ್ಲಿ ರಾಹುಲ್ ಕ್ಯಾಚೊಂದನ್ನು ಹಿಡಿದಿದ್ದರು. ಆದರೆ ಚೆಂಡು ನೆಲಕ್ಕೆ ತಾಗಿತ್ತು. ಈ ವಿಚಾರ ಯಾರ ಅರಿವಿಗೂ ಬಂದಿರಲಿಲ್ಲ. ತಂಡದ ಎಲ್ಲ ಆಟಗಾರರೂ ವಿಕೆಟ್ ಪಡೆದ ಸಂಭ್ರಮಾಚರಣೆಗೆ ಮುಂದಾದರು. ಆದರೆ ಚೆಂಡು ನೆಲಕ್ಕೆ ತಾಗಿತ್ತು. ಇದು ರಾಹುಲ್ ಗೆ ಮಾತ್ರ ಗೊತ್ತಿತ್ತು. ಒಂದು ಕ್ಷಣ ಪರ್ಫೆಕ್ಟ್ ಕ್ಯಾಚ್‌ನಂತೆ ಭಾಸವಾಗುತ್ತಿತ್ತು. ಆದರೆ ಕ್ರೀಡಾಸ್ಫೂರ್ತಿ ಮೆರೆದ ರಾಹುಲ್ ನಾಟೌಟ್ ಎಂದು ಅಂಪೈರ್‌ಗಳಿಗೆ ಸಂಕೇತ ಮಾಡಿದರು. ಬಳಿಕ ಫೀಲ್ಡ್ ಅಂಪೈರ್‌ಗಳು ಸಹ ರಾಹುಲ್ ನಡೆಗೆ ಭೇಷ್ ಹೇಳಿದರು.
ಪ್ರಸಕ್ತ ಸರಣಿಯಲ್ಲೇ ಅನೇಕ ಬಾರಿ ಕ್ಯಾಚ್ ಗಳು ವಿವಾದವಾಗಿರುವ ಪ್ರಸಂಗಗಳು ನಡೆದಿದೆ. ಹಾಗಿರುವಾಗ ರಾಹುಲ್ ಮೆರೆದಿರುವ ಕ್ರೀಡಾಸ್ಫೂರ್ತಿಯು ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಕಾರಣಕ್ಕೆ ಆಸಿಸ್ ಅಭಿಮಾನಿಗಳೂ ಕೂಡ ಕೆಎಲ್ ರಾಹುಲ್ ನಡೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Comments are closed.