ಕರಾವಳಿ

ಬೋಟ್ ನಾಪತ್ತೆ ಪ್ರಕರಣ: ಕ್ರಮಕ್ಕಾಗಿ ಸರಕಾರಕ್ಕೆ ಒತ್ತಡ; ಕಡಲು ಬಿಟ್ಟು ರಸ್ತೆಗಿಳಿದ ಮೀನುಗಾರರು

Pinterest LinkedIn Tumblr

ಉಡುಪಿ: ಕಳೆದ 22 ದಿನಗಳ ಹಿಂದೆ ಸುವರ್ಣ ತ್ರಿಭುಜ ಎನ್ನುವ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿರುವ 7 ಮಂದಿ ಉಡುಪಿಯ ಮೀನುಗಾರರನ್ನು ಹುಡುಕಿ ಕೊಡಲು ಆಗ್ರಹಿಸಿ ಸಾವಿರಾರು ಮೀನುಗಾರರು ಕಡಲಿಗಿಳಿಯದೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.

ಉಡುಪಿಯಲ್ಲಿ ಪ್ರತಿಭಟನೆ….
ಉಡುಪಿಯ ಮಲ್ಪೆಯಿಂದ ಕಾಲ್ನಡಿಗೆಯಲ್ಲಿ ಹೊರಟ ಸಾವಿರಾರು ಮೀನುಗಾರರು ಕರಾವಳಿ ಬೈಪಾಸ್‌ನಲ್ಲಿ ತಿರುಗಿ ಮೇಲ್ಸೇತುವೆ ಮೂಲಕ ಅಂಬಲಪಾಡಿ ಬೈಪಾಸ್‌ಗೆ ಬಂದು ರಾಸ್ತಾ ರೋಕೋ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಮಲ್ಪೆಯ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಸಂಪೂರ್ಣ ನಿಲ್ಲಿಸಿ ಮೀನುಗಾರರು ಸಾಚಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದಾರೆ. ಮೀನುಗಾರ ಮಹಿಳೆಯರು ಅಪಾರ ಸಂಖ್ಹ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕಂಡುಬಂದಿತ್ತು.

Comments are closed.