ಕ್ರೀಡೆ

ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿ: ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ; ಠಾಕೂರ್, ರಿಷಾಂಕ್ ದೇವಾಡಿಗ, ರೋಹಿತ್ ಆಟಕ್ಕೆ ಹೆದರಿದ ಪಾಕ್

Pinterest LinkedIn Tumblr

ದುಬೈ: ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸತತ 2ನೇ ಗೆಲುವು ದಾಖಲಿಸಿದೆ. ಮೊದಲ ಮುಖಾಮುಖಿಯಲ್ಲಿ 36-20 ಅಂಕಗಳ ಗೆಲುವು ಸಾಧಿಸಿದ್ದ ಭಾರತ ಇದೀಗ 2ನೇ ಮುಖಾಮುಖಿಯಲ್ಲಿ 47-17 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ.

ಫಸ್ಟ್ ಹಾಫ್‌ನಲ್ಲಿ ಮೊದಲು ರೈಡ್ ಆರಂಭಿಸಿದ ಪಾಕಿಸ್ತಾನ ಬರೀಗೈಯಲ್ಲಿ ವಾಪಾಸ್ಸಾಯಿತು. ಆದರೆ ಭಾರತ ತನ್ನ ಮೊದಲ ರೈಡ್‌ನಲ್ಲೇ 3 ಅಂಕ ಪಡೆಯೋ ಮೂಲಕ ಸೂಪರ್ ರೈಡ್ ಪ್ರಶಂಸೆಗೆ ಪಾತ್ರವಾಯಿತು.

ನಾಯಕ ಅಜಯ್ ಠಾಕೂರ್, ರಿಷಾಂಕ್ ದೇವಾಡಿಗ, ರೋಹಿತ್ ಕುಮಾರ್ ಸೇರಿದಂತೆ ಭಾರತೀಯ ರೈಡ್‌ನಿಂದ ಪಾಕಿಸ್ತಾನ ಸುಸ್ತಾಯಿತು. ಮೊದಲಾರ್ಧದ ಅಂತ್ಯದಲ್ಲಿ ಭಾರತ 18-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ದ್ವಿತಿಯಾರ್ಧದಲ್ಲೂ ಭಾರತ ಪರಾಕ್ರಮ ಮುಂದುವರೆಯಿತು. ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ 41-17 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ ತಂಡವನ್ನ 2ನೇ ಬಾರಿ ಸೋಲಿಸಿ ಸಂಭ್ರಮಿಸಿತು. ಗೆಲುವಿನ ಅಲೆಯಲ್ಲಿರುವ ಭಾರತ ದುಬೈ ಮಾಸ್ಟರ್ಸ್ ಕಬಡ್ಡಿ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.

Comments are closed.