ಗಲ್ಫ್

ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾಗಿ ಅನಂದ್ ಬೈಲೂರ್ ಆಯ್ಕೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ಭಾಷಾ ಸಂಘಟನೆಗಳಲ್ಲಿ ಒಂದಾಗಿರುವ ಕರ್ನಾಟಕ ಸಂಘ ಶಾರ್ಜಾ ಕಳೆದ ಹದಿನೈದು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.

2018-19ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಶ್ರೀ ಅನಂದ್ ಬೈಲೂರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀ ಎಂ ಇ. ಮೂಳೂರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ನೋವೆಲ್ ಡಿ’ಅಲ್ಮೆಡಾ ಜವಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.

ಸಹಕಾರ್ಯದರ್ಶಿ : ವಿಶ್ವನಾಥ್ ಶೆಟ್ಟಿ
ಖಜಾಂಚಿ : ಶಶಿಕಾಂತ್ ಕಾನಂಗಿ
ಸಾಂಸ್ಕೃತಿಕ ಕಾರ್ಯದರ್ಶಿ : ರಾಜೇಶ್ ಕುತ್ತಾರ್
ಕ್ರೀಡಾ ಕಾರ್ಯದರ್ಶಿ : ಜೀವನ್ ಕುಕ್ಯಾನ್
ಸಹ ಕ್ರೀಡಾಕಾರ್ಯದರ್ಶಿ : ಸಂದೀಪ್ ರಾವ್

ಪೋಷಕರಾದ ಶ್ರೀ ಮಾರ್ಕ್ ಡೆನಿಸ್ ಡಿ’ಸೋಜಾ ರವರು ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಲಹೆಗಾರರು ಶ್ರೀಯುತರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್, ಬಿ. ಕೆ. ಗಣೇಶ್ ರೈ, ಪ್ರಭಾಕರ ಅಂಬಲ್ತೆರೆ, ಸತೀಶ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಸುಗಂಧ ರಾಜ್ ಬೇಕಲ್ ಮತ್ತು ಅನಂತ್ ರಾಮನ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕರ್ನಾಟಕ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿ ಇತ್ತಿಚೆಗೆ ನಿಧನರಾಗಿದ್ದ ಬಸಂತ್ ಬೇಕಲ್ ರವರಿಗೆ ಶದ್ಧಾಂಜಲಿಯನ್ನು ಸಲ್ಲಿಸಲಾಯಿತು. ವಂದಾನರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.

Comments are closed.