ಕರ್ನಾಟಕ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ

Pinterest LinkedIn Tumblr

ಮಡಿಕೇರಿ : ಖ್ಯಾತ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕೊಡಗಿನ ಅಶ್ವಿನಿ ಪೊನ್ನಪ್ಪ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಾಡೆಲ್ ಪಿ.ಕರನ್ ಮೇದಪ್ಪ ಅವರೊಂದಿಗೆ ಇಂದು ಅದ್ದೂರಿ ವಿವಾಹ ಸಮಾರಂಭ ನಡೆಯಿತು.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ನೆರವೇರಿತು. ಕೊಡವ ಸಾಂಪ್ರದಾಯಿಕ ಉಡುಗೆ ಹಾಗೂ ಚಿನ್ನಾಭರಣದಲ್ಲಿ ನವಜೋಡಿಗಳು ಮಿಂಚಿದರು. ವಿವಾಹ ನಂತರ ಸಂಪ್ರದಾಯದಂತೆ ವಧು ಮತ್ತು ವರ ಗಂಗೆಪೂಜೆಯಲ್ಲಿ ಪಾಲ್ಗೊಂಡರು.

ಅಶ್ವಿನಿ ಪೊನ್ನಪ್ಪ ಅವರ ತಂದೆ ಎಂ.ಎ.ಪೊನ್ನಪ್ಪ, ತಾಯಿ ಕಾವೇರಿ ಪೊನ್ನಪ್ಪ ಸೇರಿದಂತೆ ಕುಟುಂಬದ ಸದಸ್ಯರು, ಕ್ರೀಡಾಪಟುಗಳು, ರಾಜಕಾರಣಿಗಳು, ಬಂಧು ಮಿತ್ರರು ನವಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭ ಹಾರೈಸಿದರು.

Comments are closed.