ಕರಾವಳಿ

ಉಡುಪಿಯಲ್ಲಿ ರಾಜ್ಯ ಮಟ್ಟದ ಖೇಲೋ ಇಂಡಿಯಾ ಈಜು ಸ್ಪರ್ಧೆ ಉದ್ಘಾಟನೆ

Pinterest LinkedIn Tumblr

ಉಡುಪಿ: ರಾಜ್ಯದ ನೂತನ ಕ್ರೀಡಾ ನೀತಿಯನ್ನು ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಮಂಗಳವಾರ ಉಡುಪಿ ಅಜ್ಜರಕಾಡು ಈಜು ಕ್ರೀಡಾಂಗಣದಲ್ಲಿ , ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಉಡುಪಿ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಭಾರತ ಸರ್ಕಾರದ ಕ್ರೀಡಾ ಮಂತ್ರಾಲಯ , ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಖೇಲೋ ಇಂಡಿಯಾ ಈಜು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ನೀತಿ ರೂಪಿಸುವ ಕುರಿತಂತೆ ಈಗಾಗಲೇ ರಾಜ್ಯದ 5 ಕಡೆಗಳಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಗಳನ್ನು ನಡೆಸಿದ್ದು, ಸಭೆಯಲ್ಲಿ ಸಂಗ್ರಹವಾದ ಸಲಹೆಗಳನ್ನು ಕ್ರೂಢೀಕರಿಸಿ, ಕರಡು ಕ್ರೀಡಾ ನೀತಿಯನ್ನು ಈಗಾಗಲೇ ರಚಿಸಲಾಗಿದ್ದು, ಈ ಕರಡು ಪ್ರತಿಯನ್ನು, ವಿವಿಧ ಕ್ಷೇತ್ರಗಳ ಕ್ರೀಡಾ ತಜ್ಞರಿಂದ ಮತ್ತೊಮ್ಮೆ ಪರಿಶೀಲಿಸಿ, 2017-18 ರ ಬಜೆಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.  ರಾಜ್ಯದ ಪ್ರಮುಖ ಕ್ರೀಡಾ ಶಕ್ತಿ ಈಜು ಸ್ಪರ್ದೇಯಾಗಿದ್ದು, ಸ್ಪರ್ಧಿಗಳು ಈ ವಿಭಾಗದಲ್ಲಿ ಹೆಚ್ಚಿನ ಸಾಧನೆ ತೋರುವಂತೆ ತಿಳಿಸಿದ ಸಚಿವರು, ಕ್ರೀಡಾನೀತಿಯಲ್ಲಿ ಸಹ ಈಜು ವಿಭಾಗದಲ್ಲಿ ಹೆಚ್ಚು ಬಲಗೊಳ್ಳುವಂತೆ ಮಾಡಲಾಗುವುದು, ಮುಂದಿನ ಟೋಕಿಯೋ ಒಲಂಪಿಕ್ಸ್ ನ ಈಜು ಸ್ಪರ್ದೇಯಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು.

ರಾಜ್ಯದ 15 ಜಿಲ್ಲೆಗಳಿಂದ ಆಗಮಿಸಿದ್ದ 14 ರಿಂದ 17 ರ ವಯೋಮಾನದ ಈಜು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸದ್ದು, 50 ಮೀಟರ್ ವಿಭಾಗದಲ್ಲಿ ವಿವಿಧ ಈಜು ಸ್ಪರ್ದೇಗಳು ನಡೆಯಲಿವೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕರಿ ಪ್ರಿಯಾಂಕ ಮೇರಿ ಫ್ರಾನಿಸ್, ಈಜು ಸ್ಪರ್ದೇಯ ವೀಕ್ಷಕ ವಿಶ್ವಾಸ ಪವಾರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Comments are closed.