ಕರಾವಳಿ

ವಿಮಾನ ಯಾನಿಗಳ ಸಂಖ್ಯೆ ಇಳಿಕೆ : ಶಾರ್ಜಾಕ್ಕೆ ಜೆಟ್ ಏರ್ವೇಸ್ ನೇರ ವಿಮಾನ ಯಾನ 3 ತಿಂಗಳು ರದ್ದು

Pinterest LinkedIn Tumblr

ಮಂಗಳೂರು, ಜನವರಿ.10: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಜೆಟ್ ಏರ್ವೇಸ್ ನೇರ ವಿಮಾನ ಯಾನವನ್ನು ಜ.8ರಿಂದ ಮೂರು ತಿಂಗಳುಗಳ ರದ್ದುಗೊಳಿಸಲಾಗಿದೆ ಎಂದು ಮಂಗಳೂರಿನ ಜೆಟ್ ಏರ್ವೇಸ್ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.

ಮಾರ್ಚ್ ಅಂತ್ಯದವರೆಗೆ ಇದು ಜಾರಿಯಲ್ಲಿರುತ್ತದೆ. ವಿಮಾನ ಯಾನಿಗಳ ಸಂಖ್ಯೆಯಲ್ಲಿ ಉಂಟಾಗಿರುವ ಗಣನೀಯ ಇಳಿಕೆಯೇ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ರಾಧಾಕೃಷ್ಣ ಅವರು, ಮುಂದಿನ ದಿನಗಳಲ್ಲಿ ಮತ್ತೆ ಶಾರ್ಜಾಕ್ಕೆ ವಿಮಾನ ಹಾರಾಟ ಮಾಡಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಂಗಳೂರು-ಶಾರ್ಜಾ ನಡುವೆ ಜೆಟ್ ಏರ್ವೇಸ್ ನೇರ ವಿಮಾನ ಯಾನ ಮತ್ತೆ ಪುನಾರಂಭ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.ವಿಮಾನ ರದ್ದುಗೊಳಿಸಿರುವ ನಿರ್ಧಾರಕ್ಕೆ ಪ್ರಯಾಣಿಕರು ಮಾತ್ರ ಅಸಮಾಧಾನಗೊಂಡಿದ್ದಾರೆ.

Comments are closed.