ಕರಾವಳಿ

ಜ.13ರಿಂದ 15 : ಮಂಗಳೂರಿನಲ್ಲಿ ಮಕ್ಕಳ,ಪುರುಷರ ಹಾಗೂ ಮಹಿಳೆಯರ “ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ”

Pinterest LinkedIn Tumblr

ಮಂಗಳಾ ಕ್ಲಬ್ ವತಿಯಿಂದ ಮಂಗಳಾ ಕಪ್ – 2017

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಜನವರಿ.10: ಯುವ ಕ್ರೀಡಾಳುಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದ ಮಂಗಳಾ ಕ್ಲಬ್ ವತಿಯಿಂದ ಮಂಗಳಾ ಕಪ್ – 2017 ಕರ್ನಾಟಕ ಹಾಗೂ ಕೇರಳ ರಾಜ್ಯಮಟ್ಟದ “ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ”ಯನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ಬರುವ ಜನವರಿ.13ರಿಂದ 15ರವರೆಗೆ ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿ ನಡೆಯಲಿದೆ ಎಂದು ಮಂಗಳಾ ಕ್ಲಬ್‌ನ ಅಧ್ಯಕ್ಷ ಎ.ಎಸ್.ವೆಂಕಟೇಶ್ ಅವರು ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 3 ದಿನಗಳ ಕಾಲ ನಡೆಯಲಿರುವ ಪಂದ್ಯಾಟದಲ್ಲಿ ಕರ್ನಾಟಕ ಹಾಗೂ ಕೇರಳದ ಸ್ಪರ್ಧಿಗಳು ಭಾಗವಹಿಸಲಿದ್ದು, 13 ವರ್ಷ, 16-19 ವರ್ಷಗಳ ಒಳಗಿನವರಿಗೆ ಸಿಂಗಲ್ಸ್ ಮತ್ತು ಡಬ್ಬಲ್ಸ್ ಮುಕ್ತ ಡಬ್ಬಲ್ಸ್, ಮಿಕ್ಸ್ ಓಪನ್ ಡಬ್ಬಲ್ಸ್ 35-45 ವರ್ಷ ಮೇಲ್ಪಟ್ಟ ಪುರುಷರ ಡಬ್ಬಲ್ಸ್ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರ ಪಂದ್ಯ ನಡೆಯಲಿದೆ. ಈ ಪಂದ್ಯಾಟದ ಒಟ್ಟು ಬಹುಮಾನದ ಮೊತ್ತ 4,75,000 ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಜನವರಿ 13ರ ಶುಕ್ರವಾರದಂದು ಬೆಳಿಗ್ಗೆ 9.30ಕ್ಕೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ಜನವರಿ 15ರ ಬಾನುವಾರ ಸಂಜೆ 6.30ಕ್ಕೆ ಬಹುಮಾನ ವಿತರಣೆಯೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಜನಪ್ರತಿನಿಧಿಗಳು, ನಗರದ ಉದ್ಯಮಿಗಳು ಹಾಗೂ ಪ್ರಶಸ್ತಿ ವಿಜೇತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.

ಸಂಘದ ಪಧಾಧಿಕಾರಿ ಸಿ.ಎಸ್.ಭಂಡಾರಿ ಮಾತನಾಡಿ, 2011ರಲ್ಲಿ 40 ಸದಸ್ಯರಿಂದ ಆರಂಭವಾದ ಮಂಗಳಾ ಕ್ಲಬ್‌ನಲ್ಲಿ ಇದೀಗ 170ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಮಂಗಳಾ ಕ್ಲಬಿನ ಸದಸ್ಯರು ಹಲವಾರು ಕ್ರೀಡಾಳುಗಳಿಗೆ ತರಭೇತಿ ನೀಡಿ ಅದೆಷ್ಟೋ ಕ್ರೀಡಾಪಟುಗಳು ರಾಜ್ಯಮಟ್ಟ – ರಾಷ್ಟ್ರಮಟ್ಟದಲ್ಲಿ ಅಯ್ಕೆ ಹೊಂದುವಲ್ಲಿ ಸಫಲರಾಗಿದ್ದಾರೆ. ಮಾತ್ರವಲ್ಲದೇ ನಮ್ಮ ಕ್ಲಬಿನ ಸದಸ್ಯರು ಓಪನ್ ಡಬಲ್ಸ್, ಮಿಕ್ಸ್ ಡಬಲ್ಸ್, 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಹಲವಾರು ಬಾರಿ ವಿಜೇತರಾಗಿ ಕ್ಲಬಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

ಪಂದ್ಯಾಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ :9148725877 ಅನ್ನು ಸಂಪರ್ಕಿಸ ಬಹುದು ಅಥವಾ ಈ ಸಂಖ್ಯೆಗೆ ವಾಟ್ಸ್ ಆಪ್ ಅಥವಾ ಎಸ್‌ಎಂಎಸ್ ಮೂಲಕ ಜ.12ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಭಂಡಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬಿನ ಉಪಾಧ್ಯಕ್ಷರಾದ ಅಶೋಕ್ ಹೆಗ್ಡೆ, ಅನಿಲ್ ರಾವ್, ಪಧಾಧಿಕಾರಿಗಳಾದ ದೀಪಕ್ ಕುಮಾರ್, ಪರಿಮಿಳಾಝಗನ್, ಸುಪ್ರೀತಾ ಆಳ್ವಾ, ಎ.ಕೆ.ನಿಯಾಝ್,ಸಂತೋಷ್ ಶೆಟ್ಟಿ, ಶಿವಪ್ರಸಾದ್ ಪ್ರಭು, ಲಕ್ಷ್ಮಿ ಸುವರ್ಣ, ಮುಂತಾದವರು ಉಪಸ್ಥಿತರಿದ್ದರು.

ವರದಿ / ಚಿತ್ರ : ಸತೀಶ್ ಕಾಪಿಕಾಡ್ – ಮೊಬೈಲ್ ಸಂಖ್ಯೆ : 9035089084

Comments are closed.