ನವದೆಹಲಿ: ನಿತ್ಯದ ಯೋಗವನ್ನೂ ಬಿಟ್ಟು ಅಮ್ಮನನ್ನು ಭೇಟಿ ಮಾಡಲು ಹೋದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಗೆಯಾಡಿದ್ದಾರೆ.
ಇವತ್ತು ಬೆಳಗ್ಗೆ ತನ್ನ ನಿತ್ಯದ ಯೋಗವನ್ನು ಬಿಟ್ಟು ಅಮ್ಮನನ್ನು ಭೇಟಿ ಮಾಡಿ ಅವರೊಂದಿಗೆ ಬೆಳಗ್ಗಿನ ತಿಂಡಿ ತಿಂದೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.
Follow
Narendra Modi ✔ @narendramodi
Skipped Yoga & went to meet mother. Before dawn had breakfast with her. Was great spending time together.
7:29 AM – 10 Jan 2017
5,336 5,336 Retweets 22,977 22,977 likes
ಈ ಟ್ವೀಟ್ ಬಗ್ಗೆ ನಗೆಯಾಡಿದ ಕೇಜ್ರಿವಾಲ್, ನಾನು ನನ್ನ ಅಮ್ಮನೊಂದಿಗೆ ವಾಸಿಸುತ್ತಿದ್ದೇನೆ. ಪ್ರತೀ ದಿನ ನಾನು ಆಕೆಯ ಆಶೀರ್ವಾದ ಪಡೆಯುತ್ತೇನೆ. ಆದರೆ ಆ ಬಗ್ಗೆ ಡಂಗುರ ಸಾರುವುದಿಲ್ಲ. ರಾಜಕೀಯ ಲಾಭಕ್ಕಾಗಿ ನಾನು ಆಕೆಯನ್ನು ಸರದಿ ಸಾಲಿನಲ್ಲಿ ನಿಲ್ಲಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Follow
Arvind Kejriwal ✔ @ArvindKejriwal
मैं अपनी माँ के साथ रहता हूँ, रोज़ उनका आशीर्वाद लेता हूँ लेकिन ढिंढोरा नहीं पीटता। मैं माँ को राजनीति के लिए बैंक की लाइन में भी नहीं लगाता https://twitter.com/narendramodi/status/818638247165247488 …
10:05 AM – 10 Jan 2017
2,413 2,413 Retweets 3,430 3,430 likes
ಇನ್ನೊಂದು ಟ್ವೀಟ್‍ನಲ್ಲಿ ಹಿಂದೂ ಧರ್ಮದ ಪ್ರಕಾರ ನೀವು ನಿಮ್ಮ ವಯಸ್ಸಾದ ಅಮ್ಮನನ್ನು ಮತ್ತು ಪತ್ನಿಯನ್ನು ಜತೆಗೇ ಇರಿಸಿಕೊಳ್ಳಬೇಕು. ನಿಮ್ಮ ಮನೆ ತುಂಬಾ ದೊಡ್ಡದಿದೆ. ನಿಮ್ಮ ಮನಸನ್ನೂ ದೊಡ್ಡದು ಮಾಡಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Follow
Arvind Kejriwal ✔ @ArvindKejriwal
हिंदू धर्म और भारतीय संस्कृति कहती है कि आपको अपनी बूढ़ी माँ और धर्मपत्नी को अपने साथ रखना चाहिए। PM आवास बहुत बड़ा है, थोड़ा दिल बड़ा कीजिए https://twitter.com/narendramodi/status/818638247165247488 …
10:14 AM – 10 Jan 2017
2,252 2,252 Retweets 3,232 3,232 likes
ಕೇಂದ್ರ ಸರ್ಕಾರ ನೋಟು ರದ್ದತಿ ತೀರ್ಮಾನ ಕೈಗೊಂಡಾಗ ಮೋದಿಯವರ ತಾಯಿ ಹಳೇ ನೋಟುಗಳನ್ನು ಜಮೆ ಮಾಡಲು ಗಾಂಧಿನಗರ ಬ್ಯಾಂಕ್‍ಗೆ ಬಂದು ಸರದಿ ಸಾಲಿನಲ್ಲಿ ನಿಂತದ್ದು ಸುದ್ದಿಯಾಗಿತ್ತು.
Comments are closed.