
ಮಹಾರಾಷ್ಟ್ರ: ಕಳೆದ ತಿಂಗಳು ಭಾರತೀಯ ವಾಯುಸೇನೆಯ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2016ರಲ್ಲಿ ಯಾವ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ ಫಿಲ್ಮ್ ಫೇರ್ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿತ್ತು? ಎಂಬ ಪ್ರಶ್ನೆ ಕೇಳಲಾಗಿತ್ತು. ಇದೀಗ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಚಾಚಾ ನೆಹರು ಹಿಂದಿ ಹೈಸ್ಕೂಲ್‍ನ 9ನೇ ತರಗತಿಯ ದೈಹಿಕ ಶಿಕ್ಷಣ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯವರಿಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕೇಳಲಾಗಿದೆ. ಅಂದಹಾಗೆ ಈ ಪ್ರಶ್ನೆ ಕ್ರಿಕೆಟ್‍ಗೆ ಸಂಬಂಧಪಟ್ಟದ್ದೇನೂ ಅಲ್ಲ. ಈ ಪ್ರಶ್ನೆ ಕೊಹ್ಲಿಯ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು!
ವಿರಾಟ್ ಕೊಹ್ಲಿಯ ಗರ್ಲ್ ಫ್ರೆಂಡ್ ಯಾರು? ಈ ಪ್ರಶ್ನೆಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ.
ಉತ್ತರದ ಆಯ್ಕೆಗಳು ಹೀಗಿವೆ: ಪ್ರಿಯಾಂಕಾ (ಚೋಪ್ರಾ), ಅನುಷ್ಕಾ (ಶರ್ಮಾ), ದೀಪಿಕಾ (ಪಡುಕೋಣೆ)
ದೈಹಿಕ ಶಿಕ್ಷಣ ವಿಷಯದಲ್ಲಿ ಈ ರೀತಿಯ ಪ್ರಶ್ನೆಯನ್ನು ಕೇಳಿದ್ದು ಯಾಕೆ? ಎಂಬುದು ಇದೀಗ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಈ ಹಿಂದೆ ವೆಲ್ಲೂರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಸೂಪರ್ ಹಿಟ್ ಚಿತ್ರ ಬಾಹುಬಲಿಯ ಯುದ್ಧದ ದೃಶ್ಯಗಳನ್ನು ಚಿತ್ರಿಸುವಂತೆ ಹೇಳಲಾಗಿತ್ತು.
Comments are closed.