ಕ್ರೀಡೆ

ಮಿಯಾಮಿ ಫೈನಲ್‌ಗೇರಿದ ಸಾನಿಯಾ- ಮಾರ್ಟೀನಾ ಜೋಡಿ

Pinterest LinkedIn Tumblr

Sania-Mirza

ಮಿಯಾಮಿ,ಏ.4: ವಿಶ್ವ ಶ್ರೇಷ್ಠ ಟೆನಿಸ್ ಜೋಡಿಯಾದ ಭಾರತದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಎಂಗೀಸ್ ಅವರು ಮಿಯಾಮಿ ಟೆನಿಸ್ ಟೂರ್ನಿಯ ಸೆಮಿಫೈನಲ್ ಗೆದ್ದು ಫೈನಲ್‌ಗೆ ಏರಿದ್ದಾರೆ.

ಸೆಮಿಫೈನಲ್‌ನಲ್ಲಿ ಇಂಡೋ- ಸ್ವಿಸ್‌ನ ಜೋಡಿಯಾದ ಟಿಮಿಯಾ ಬಾಬೋಸ್ ಹಾಗೂ ಕ್ರಿಸ್‌ಟೀನಾ ಮಾಲ್‌ಡಿನೋವೀಕ್ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿ ಸಾನಿಯಾ ಹಾಗೂ ಮಾರ್ಟಿನಾ ಎಂಗೀಸ್ ಫೈನಲ್‌ಗೇರಿದೆ. ಫೈನಲ್‌ನಲ್ಲಿ ಈ ಜೋಡಿಯು ಎಕ್‌ಟೀರೀನಾ ಮಾಕಾರೋವಾ ಹಾಗೂ ಎಲಿನಾ ವಿಸ್‌ನೀನಾ ಜೋಡಿಯನ್ನು ಸಾನಿಯಾ- ಮಾರ್ಟಿನಾ ಜೋಡಿ ಎದುರಿಸಲಿದೆ.

ಮಿಯಾಮಿ ಟೆನ್ನಿಸ್ ಚಾಂಪಿಯನ್‌ಶಿಪ್ : ಡಿಕೋವಿಚ್‌ಗೆ ಜಯ
ಮಿಯಾಮಿ: ಪುರುಷ ವಿಭಾಗದ ಮಿಯಾಮಿ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನೋವೋಕ್ ಡಿಕೋವಿಚ್ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್‌ಗೇರಿದ್ದಾರೆ. ಸೆಮಿಫೈನಲ್ ಅವರು ಸಿಝೀಕ್ ಟೋಮ್ ಬಿರ್‌ಡೈಸಿಚ್‌ರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದರು.ನಾಳೆ ಇಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಅವರು ವಿಶ್ವದ ನಂಬರ್ 1 ಆಟಗಾರ ಆಂಡಿ ಮುರ್ರೆರನ್ನು ಎದುರಿಸಲಿದ್ದಾರೆ.

Write A Comment