ಮನೋರಂಜನೆ

ಐಪಿಎಲ್‌ನಲ್ಲಿ ಮಿಂಚುವರೇ ವಿಶ್ವಕಪ್ ‘ಪ್ಲಾಫ್’ ಆಟಗಾರರು..?

Pinterest LinkedIn Tumblr

IPL-Players-in

ವಿಶ್ವಹಬ್ಬದಲ್ಲಿ ತಮ್ಮ ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡದ ಸೋಲಿಗೆ ಪ್ರಮುಖ ಕಾರಣರಾಗಿರುವ ವಿಶ್ವಶ್ರೇಷ್ಠ ಆಟಗಾರರು ಭಾರತೀಯ ಕ್ರಿಕೆಟ್ ಹಬ್ಬವೆಂದೇ ಬಿಂಬಿಸಿಕೊಂಡಿರುವ ಐಪಿಎಲ್‌ನಲ್ಲಿ ತಾವು ಪ್ರತಿನಿಧಿಸುತ್ತಿರುವ ತಂಡಕ್ಕೆ ಕಪ್ ತಂದುಕೊಡುವ ಉತ್ಸಾಹದಲ್ಲಿದ್ದಾರೆ. ಈ ಫ್ಲಾಫ್ ಶೋ ತೋರಿದ ಆಟಗಾರರಲ್ಲಿ ನಮ್ಮ ಆರ್‌ಸಿಬಿ ತಂಡದ ಸ್ಟೈಲಿಶ್ ಬ್ಯಾಟ್ಸ್ ಮ್ಯಾನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆರಿಬಿಯನ್ ನಾಡಿನ ಸ್ಫೋಟಕ ಆಟಗಾರರಾದ ಕ್ರಿಸ್ ಗೇಲ್, ಡ್ಯಾರೇನ್ ಸ್ಯಾಮಿ ಕೂಡ ಸ್ಥಾನ ಪಡೆದಿರುವುದು ಸೋಜಿಗ.

ವಿರಾಟ್ ಕೊಹ್ಲಿ:
ವಿಶ್ವಕಪ್‌ನ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದ ಕೊಹ್ಲಿ ಉತ್ತಮ ಹೋರಾಟ ವನ್ನು ಪ್ರದರ್ಶಿಸಿ ದ್ದರು. ಅಲ್ಲದೆ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲೇ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿ ಗಮನ ಸೆಳೆದರೂ ನಂತರ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನವನ್ನೇ ತೋರಿ ಟೀಕಾಕಾರರ ಬಾಯಿಗೆ ತುತ್ತಾಗಿದ್ದಾರೆ. ವಿಶ್ವಕಪ್‌ನಲ್ಲಿ ಆಡಿದ 8 ಪಂದ್ಯಗಳಿಂದ 75.25ರ ಸರಾಸರಿ 300 ರನ್‌ಗಳನ್ನು ಕೊಹ್ಲಿ ಗಳಿಸಿದರೂ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತೋರಿದ ಫ್ಲಾಫ್ ಷೋನಿಂದ ಇವರ ಸಾಧನೆ ಮಣ್ಣುಪಾಲಾಗಿದೆ.

ಕ್ರಿಸ್ ಗೇಲ್:
ಜಿಂಬಾಬ್ವೆ ವಿರುದ್ಧ ತಾವು ತೋರಿದ ಅದ್ಭುತ ಪ್ರದರ್ಶನದಿಂದ ವಿಶ್ವಕಪ್ ಇತಿಹಾಸದಲ್ಲೇ ಮೊದಲ ದ್ವಿಶತಕ (215)ವನ್ನು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಗೇಲ್ ಭಾಜನರಾದರೂ ತಂಡವನ್ನು ಸೆಮಿಫೈನಲ್‌ಗೆ ಏರಿಸುವಲ್ಲಿ ಎಡವಿದ್ದರು. ಆದರೆ ಐಪಿಎಲ್‌ನಲ್ಲಿ ಅತಿ ವೇಗದ ಶತಕ, ಅತಿ ಹೆಚ್ಚು ಶತಕ, ಸಿಕ್ಸರ್‌ಗಳ ಸರದಾರ ಎಂದು ಗುರುತಿಸಿಕೊಂಡಿರುವ ಗೇಲ್ ಈಗ ಐಪಿಎಲ್ 8ರಲ್ಲೂ ಅದೇ ಚಾರ್ಮ್‌ನಿಂದ ಆಡುವ ಹೆಬ್ಬಯಕೆ ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ಆಡಿದ 6 ಪಂದ್ಯಗಳಿಂದ 1 ಶತಕ, 1 ಅರ್ಧಶತಕ ನೆರವಿನಿಂದ 340 ರನ್‌ಗಳನ್ನು ಗಳಿಸಿದ್ದರು.

ಮಾಲಿಂಗ (ಮುಂಬೈ ಇಂಡಿಯನ್ಸ್):
ಶ್ರೀಲಂಕಾ ತಂಡ ಕಂಡ ಅದ್ಭುತ ವೇಗದ ಬೌಲರ್ ಎಂದೇ ಗುರುತಿಸಿಕೊಂಡಿರುವ ಲಸಿತ್ ಮಾಲಿಂಗರವರ ಬೌಲಿಂಗ್ ಜಾದೂ 2015ರಲ್ಲಿ ಮಾತ್ರ ನಡೆಯಲೇ ಇಲ್ಲ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧವಂತೂ ಮಾಲಿಂಗ ಸಂಪೂರ್ಣವಾಗಿ ಎಡವಿ ತಂಡವನ್ನು ಕ್ವಾರ್ಟರ್‌ಫೈನಲ್‌ಗೆ ಸೀಮಿತಗೊಳಿಸಿದರು. ಆದರೆ ಕಳೆದ 6 ಐಪಿಎಲ್ ಋತುವಿನಿಂದಲೂ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಮಾಲಿಂಗ ಈ ಬಾರಿಯೂ ತಂಡದಲ್ಲಿ ಪ್ರಮುಖ ಬೌಲಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಆಡಿದ 7 ಪಂದ್ಯಗಳಿಂದ 354 ರನ್ ನೀಡಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ರವೀಂದ್ರ ಜಡೇಜಾ (ಸಿಎಸ್‌ಕೆ):
ಭಾರತ ತಂಡದಲ್ಲಿ ಪ್ರಮುಖ ಅಲೌಂಡರ್ ಆಗಿ ಗುರುತಿಸಿಕೊಂಡಿದ್ದ ಜಡೇಜಾ ವಿಶ್ವಕಪ್‌ನ ಉದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಎಡವಿದ್ದಾರೆ.
ವಿಶ್ವಕಪ್‌ನ 8 ಪಂದ್ಯಗಳಿಂದ ಕೇವಲ 9 ವಿಕೆಟ್ ಕೆಡವಿರುವುದು ಜಡೇಜಾರ ಕೆಟ್ಟ ಫಾರ್ಮ್‌ಗೆ ನಿದರ್ಶನವಾಗಿದೆ. ಆದರೆ ಐಪಿಎಲ್ 7ರಲ್ಲಿ ಜಡೇಜಾ 16 ಪಂದ್ಯಗಳಿಂದ 19 ಕಬಳಿಸುವ ಮೂಲಕ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು.

ಕೇನ್ ವಿಲಿಯಮ್ಸ್( ಸ.ಹೈ.ಹೈದ್ರಾಬಾದ್):
60 ಲಕ್ಷವನ್ನು ಜೇಬಿಗೇರಿಸಿಕೊಂಡು ಸನ್‌ರೈಸರ್ಸ್ ತಂಡದ ಪಾಲಾಗಿರುವ ನ್ಯೂಜಿಲ್ಯಾಂಡ್‌ನ ಆರಂಭಿಕ ಆಟಗಾರ ಕೇನ್ ವಿಲಿಯಮ್ಸ್‌ರ ಬ್ಯಾಟ್‌ನಿಂದ ವಿಶ್ವಕಪ್‌ನಲ್ಲಿ ಹರಿದು ಬಂದದ್ದು ಕೇವಲ 1 ಶತಕ. ಫೈನಲ್ ಪಂದ್ಯವೂ ಸೇರಿದಂತೆ ಟೂರ್ನಿಯುದ್ದಕ್ಕೂ ಎಡವಿರುವ ವಿಲಿಯಮ್ಸ್ 9 ಪಂದ್ಯಗಳಿಂದ ಗಳಿಸಿದ್ದು 234 ರನ್ ಮಾತ್ರ. ಆದರೆ ಟ್ವೆಂಟಿ ಸ್ಪೆಷಾಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಇವರು ತಮ್ಮ ಬ್ಯಾಟ್‌ನಿಂದ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ತಾನು ಪ್ರತಿನಿಧಿಸಿದ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದಾರೆ.

ಎ. ಮ್ಯಾಥ್ಯುಸ್ (ಡೆಲ್ಲಿಡೇರ್‌ಡೆವಿಲ್ಸ್):
ವಿಶ್ವಕಪ್‌ನಲ್ಲಿ ಶ್ರೀಲಂಕಾದ ನಾಯಕತ್ವವನ್ನು ವಹಿಸಿದರೂ ತಂಡವನ್ನು ಸೆಮಿಫೈನಲ್ ಹಂತಕ್ಕೇರಿಸುವಲ್ಲಿ ಎಡವಿದ್ದ ಮ್ಯಾಥ್ಯೂಸ್ ಐಪಿಎಲ್‌ನಲ್ಲಿ ತಾನು ಪ್ರತಿನಿಧಿಸುವ ಡೆಲ್ಲಿಡೇರ್‌ಡೆವಿಲ್ಸ್ ತಂಡವನ್ನು ಫೈನಲ್‌ಗೇರಿಸಲೇಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಇವರೇ ಅಲ್ಲದೆ ವೆಸ್ಟ್‌ಇಂಡೀಸ್‌ನ ಡ್ವೇನ್ ಸ್ಮಿತ್ (ಚೆನ್ನೈ ಸೂಪರ್‌ಕಿಂಗ್ಸ್ ), ದಕ್ಷಿಣ ಆಫ್ರಿಕಾದ ಡಿ ಕಾಕ್ (ಡೆಡ್ಲಿ ಡೇರ್‌ಡೆವಿಲ್ಸ್ ), ಬಾಂಗ್ಲಾ ದೇಶದ ಅಲ್‌ರೌಂಡರ್ ಶಕೀಬ್ ಅಲ್ ಹಸನ್ ( ಕೋಲ್ಕತ್ತಾ ನೈಟ್ ರೈಡರ್ಸ್) , ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ( ಸನ್‌ರೈಸರ್ಸ್ ಹೈದ್ರಾಬಾದ್), ವೆಸ್ಟ್‌ಇಂಡೀಸ್‌ನ ಡ್ಯಾರೇನ್ ಸ್ಯಾಮಿ ( ಆರ್‌ಸಿಬಿ) ಪ್ರಸಕ್ತ ವಿಶ್ವಕಪ್‌ನಲ್ಲಿ ಎಡವಿದರೂ ಕೂಡ ಐಪಿಎಲ್‌ನಲ್ಲಿ ಮಿಂಚಿ ತಮ್ಮ ತಂಡಕ್ಕೆ ಕಪ್ ತಂದುಕೊಡಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.

Write A Comment