ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್ ! ಆ ಒಂದು ಆ ಫೋಟೋ ಏನು ಹೇಳುತ್ತೆ..?

Pinterest LinkedIn Tumblr

ಬಿಗ್ ಬಾಸ್ ಕನ್ನಡ ಸೀಸನ್ 8 ಟ್ರೋಫಿ ಯಾರು ಪಡೆಯುತ್ತಾರೆ ಎಂದು ತಿಳಿಯಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಈಗ ದೊಡ್ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ. ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ ಎಂಬ ಕುತೂಹಲ ಎದ್ದಿದೆ. ಈ ನಡುವೆ ಬಿಗ್ ಬಾಸ್ ಮನೆಯ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ಶಮಂತ್ ಬ್ರೊ ಗೌಡ ಮಾತ್ರ ಕಾಣುತ್ತಿಲ್ಲ. ಯಾಕೆ?

ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇಂದಿನ ವೀಕೆಂಡ್ ಶೂಟ್‌ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋ ನೋಟಿ ನೆಟ್ಟಿಗರಿಗೆ ಪ್ರಶ್ನೆಯೊಂದು ಎದ್ದಿದೆ. ಎಂಟು ಸ್ಪರ್ಧಿಗಳಿರುವ ಆ ಫೋಟೋದಲ್ಲಿ ಶಮಂತ್ ಮಾತ್ರ ಯಾಕೆ ಅಲ್ಲ? ಎಂದು ಎಲ್ಲರಿಗೂ ಪ್ರಶ್ನೆ ಕಾಡುತ್ತಿದೆ.

ಬಹುಶಃ ಸ್ಪರ್ಧಿಗಳು ಸಾಮಾನ್ಯವಾಗಿ ಫೋಟೋ ತೆಗೆದುಕೊಂಡಿರಬಹುದು. ಆ ವೇಳೆ ಶಮಂತ್ ಅಲ್ಲಿ ಇರದೆ ಇರಬಹುದು. ಫೋಟೋದಲ್ಲಿ ಶಮಂತ್ ಇಲ್ಲ ಎನ್ನುವ ಕಾರಣಕ್ಕೆ ಶಮಂತ್ ಬ್ರೊ ಗೌಡ ಔಟ್ ಆಗಿದ್ದಾರೆ ಎಂದು ನಿರ್ಧಾರಕ್ಕೆ ಬರಲಾಗದು. ಆದರೆ ಶಮಂತ್ ಯಾಕೆ ಆ ಫೋಟೋದಲ್ಲಿ ಇಲ್ಲ ಎನ್ನುವ ಕಾರಣ ತಿಳಿದುಕೊಳ್ಳಲು ನೆಟ್ಟಿಗರು ಕುತೂಹಲದಿಂದಿದ್ದಾರೆ.

ಈ ವಾರ ಡಬಲ್ ಎಲಿಮಿನೇಶನ್ ಕೂಡ ನಡೆಯುವ ಸಾಧ್ಯತೆಯಿದೆ. ಫಿನಾಲೆ ತಲುಪಲು ಸ್ಪರ್ಧಿಗಳು ಟಾಸ್ಕ್‌ನಲ್ಲಿ ಸಿಕ್ಕಾಪಟ್ಟೆ ಶ್ರಮ ಹಾಕಿದ್ದರು. ಎಲ್ಲರಿಗೂ ಈಗ ಆಟ ಚೆನ್ನಾಗಿ ಆಡಬೇಕು, ವರ್ತನೆ ಸರಿಯಾಗಿಟ್ಟುಕೊಳ್ಳಬೇಕು ಎಂಬುದಿದೆ. ಹೀಗಿದ್ದಾಗ್ಯೂ ಟಾಸ್ಕ್‌ನಲ್ಲಿ ನಾನು ಆಡ್ತೀನಿ, ನಾನು ಆಡ್ತೀನಿ ಅಂತ ಸ್ಪರ್ಧಿಗಳು ಕಿತ್ತಾಟ ನಡೆಸಿದ್ದಾರೆ. ಆಮೇಲೆ ಕಳಪೆ-ಅತ್ಯುತ್ತಮ ಪ್ರಶಸ್ತಿ ನೀಡುವಾಗಲೂ ಸ್ಪರ್ಧಿಗಳ ನಡುವೆ ಜಗಳ ನಡೆದಿದೆ.

ದಿವ್ಯಾ ಉರುಡುಗ ಎರಡನೇ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಸಂಬರಗಿ ಕಳಪೆ ಪಟ್ಟ ತಗೊಂಡು ಜೈಲು ಸೇರಿದ್ದರು. ಒಟ್ಟಿನಲ್ಲಿ ಸ್ಪರ್ಧಿಗಳ ಆಟದ ಶೈಲಿಯೂ ಬದಲಾಗಿದೆ, ಯಾರು ಈ ವಾರ ದೊಡ್ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.