ಮನೋರಂಜನೆ

‘ಬಿಗ್‌ ಬಾಸ್’ಗಾಗಿ ಜೋಯಿಸರ ಅವತಾರದಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ !

Pinterest LinkedIn Tumblr

ಕನ್ನಡದಲ್ಲಿ ಬಿಗ್‌ ಬಾಸ್‌ ಹೊಸ ಆವೃತ್ತಿ ಶುರು ಆಗುವುದು ಯಾವಾಗ? ಈ ಪ್ರಶ್ನೆ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ. ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 8’ ಆರಂಭಕ್ಕಾಗಿ ಕಿರುತೆರೆ ಪ್ರೇಕ್ಷಕರು ಕಾದಿದ್ದಾರೆ. ಅದಕ್ಕೂ ಮುನ್ನ ಕಿಚ್ಚ ಸುದೀಪ್‌ ಜೊತೆ ಸೇರಿಕೊಂಡು ಎಲ್ಲರ ಕೌತುಕ ಹೆಚ್ಚಿಸುವ ಕೆಲಸ ಮಾಡುತ್ತಿದೆ ಕಲರ್ಸ್‌ ಕನ್ನಡ ವಾಹಿನಿ.

ಪ್ರತಿ ಸೀಸನ್‌ ಆರಂಭಕ್ಕೂ ಮುನ್ನ ಸುದೀಪ್‌ ಅವರು ಬೇರೆ ಬೇರೆ ಗೆಟಪ್‌ನಲ್ಲಿ ಫೋಟೋಶೂಟ್‌ ಮಾಡಿಸುತ್ತಾರೆ. ಆದರೆ ಹಿಂದೆಂದಿಗಿಂತಲೂ ಭಿನ್ನವಾಗಿ ಈ ಸಲ ಫೋಟೋಶೂಟ್‌ ಮಾಡಿಸಲಾಗಿದೆ. ಜೋಯಿಸರ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಕಲರ್ಸ್‌ ಕನ್ನಡ ವಾಹಿನಿ ಶೇರ್‌ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ.

‘ಲಾಕ್‌ಡೌನ್‌ 8.0 ಆರಂಭಕ್ಕೆ ಕಿಚ್ಚ ಜೋಹಿಸರು ಇಟ್ಟಿರುವ ಮುಹೂರ್ತ ಯಾವುದು? ಗೆಸ್‌ ಮಾಡಿ’ ಎನ್ನುವ ಕ್ಯಾಪ್ಷನ್‌ ಜೊತೆಗೆ ಈ ಫೋಟೋವನ್ನು ಶೇರ್‌ ಮಾಡಿಕೊಳ್ಳಲಾಗಿದೆ. ಬಿಗ್‌ ಬಾಸ್‌ ಆರಂಭ ಆಗುವ ದಿನಾಂಕ ಯಾವುದು ಎಂದು ವಾಹಿನಿ ಕಡೆಯಿಂದ ಇದುವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಫೆ.28 ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು. ಅದಕ್ಕೂ ಮುನ್ನ ಕೊರೊನಾ ಕಾರಣದಿಂದ ಸ್ಪರ್ಧಿಗಳನ್ನು ಕ್ವಾರಂಟೈನ್‌ ಮಾಡುವುದು ಅವಶ್ಯಕವಾಗಿದೆ.

ಈ ಬಾರಿ ಯಾರೆಲ್ಲ ಬಿಗ್‌ ಬಾಸ್ ಪ್ರವೇಶಿಸುತ್ತಾರೆ ಎಂಬ ಬಗ್ಗೆ ದೊಡ್ಡ ಕೌತುಕ ನಿರ್ಮಾಣ ಆಗಿದೆ. ಅನೇಕರ ಹೆಸರುಗಳು ಈಗಾಗಲೇ ಹರಿದಾಡುತ್ತಿವೆ. ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಂಜಲಿ ಪಾತ್ರಧಾರಿ ಸುಕೃತಾ ನಾಗ್‌, ‘ಬಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್‌, ‘ಸಿಲ್ಲಿ ಲಲ್ಲಿ’ ರವಿಶಂಕರ್‌, ‘ಸರಿಗಮಪ’ ಹನುಮಂತ, ನಟ ಸುನಿಲ್‌ ರಾವ್‌, ‘ದಿಲ್ವಾಲ’ ಖ್ಯಾತಿಯ ನಟ ಸುಮಂತ್‌ ಶೈಲೇಂದ್ರ ಹೀಗೆ ಅನೇಕರ ಹೆಸರುಗಳು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

Comments are closed.