ಭೂಪಾಲ್: ಮಧ್ಯ ಪ್ರದೇಶದಲ್ಲಿ ತನ್ನ ಪತ್ನಿಯ ಅಶ್ಲೀಲ ಚಿತ್ರಗಳನ್ನೇ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಹರಿಬಿಟ್ಟಿದ್ದಾನೆ.
ಮಧ್ಯ ಪ್ರದೇಶದ ಹಬೀಬ್ಗಂಜ್ ಪೊಲೀಸರು ಪತ್ನಿಯ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದು, ಅರೆರಾ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಜಬಲ್ಪುರದ ನಿವಾಸಿಯಾದ ಮಹಿಳೆ ಹಾಗೂ ಆರೋಪಿ ಪತಿ 2015 ರಲ್ಲಿ ವಿವಾಹವಾದರು. ಆದರೆ ಮದುವೆಯಾದ ಕೆಲ ಸಮಯದಲ್ಲೇ ಸಂಬಂಧ ಚೆನ್ನಾಗಿರಲಿಲ್ಲ ಎನ್ನಲಾಗಿದೆ.
ತನ್ನ ಗಂಡನ ಉದ್ಯೋಗದ ಬಗ್ಗೆ ತನ್ನ ಅತ್ತೆ ಮಾವನ ಮನೆಯವರು ಸುಳ್ಳು ಹೇಳಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾರೆ. 34 ವರ್ಷದ ಆರೋಪಿ ನಿರುದ್ಯೋಗಿಯಾಗಿದ್ದು, ಮದುವೆ ನಂತರ ಈ ಬಗ್ಗೆ ಗೊತ್ತಾದಾಗ ಮಹಿಳೆ ಆತನ ಕುಟುಂಬವನ್ನು ಪ್ರಶ್ನೆ ಮಾಡಿದ್ದಾರೆ. ನಂತರ, ಪತಿ ತನ್ನನ್ನು ಹಿಂಸಿಸಲು ಪ್ರಾರಂಭಿಸಿದರು ಮತ್ತು ಅವನ ಇಚ್ಛೆಯಂತೆ ಬದುಕುವಂತೆ ಒತ್ತಾಯಿಸಿದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಅಲ್ಲದೆ, ಮಹಿಳೆ ಕೆಲವು ತಿಂಗಳ ಹಿಂದೆ ತನಗೆ ಕೆಲಸ ಸಿಗುವವರೆಗೂ ಪತಿ ಜತೆಯಲ್ಲೇ ಇದ್ದಳು. ಕೆಲಸ ಪಡೆದ ನಂತರ ಭೋಪಾಳ್ಗೆ ಶಿಫ್ಟ್ ಆಗಿದ್ದಾಗಿಯೂ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆ ತನ್ನ ಜತೆ ಇರುವುದು ಬಿಟ್ಟು ಹೊರಹೋಗಿರುವುದಕ್ಕೆ ಕೆರಳಿದ ಆರೋಪಿ ಪತಿ, ತನ್ನ ಹೆಂಡತಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಅಪ್ಲೋಡ್ ಮಾಡಿದನು. ಅಲ್ಲದೆ, ಅಶ್ಲೀಲ ಸ್ಥಿತಿಯಲ್ಲಿರುವ ಆ ಫೋಟೋ ಹಾಕಿ ತನ್ನನ್ನು ಟ್ಯಾಗ್ ಮಾಡಿದ್ದ ಎಂದೂ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಮಹಿಳೆ ಆ ಬಗ್ಗೆ ತಿಳಿದು, ತನ್ನ ಗಂಡನೊಂದಿಗೆ ಮಾತಾಡಿದಳು. ಆದರೆ, ಆತ ತಾನು ನಿನ್ನನ್ನು ಬಿಟ್ಟು ಬೇರೆಯವಳನ್ನು ಮದುವೆಯಾಗುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದೂ ಹಬೀಬ್ಗಂಜ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ.
ಈ ಸಂಬಂಧ ಹಬೀಬ್ಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀತಾ ಭಲೇರಾವ್ ಅವರು ಜಬಲ್ಪುರದಲ್ಲಿ ವಾಸಿಸುತ್ತಿರುವ ಆರೋಪಿ ವಿರುದ್ಧ ಐಪಿಸಿಯ 494, 509 ಮತ್ತು 506 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.