ಮನೋರಂಜನೆ

‘ಕೆಜಿಎಫ್‌: ಚಾಪ್ಟರ್‌ 2’; ಸಂಜಯ್ ದತ್ ಅಧೀರ ಪಾತ್ರಕ್ಕೆ ಧ್ವನಿ ನೀಡಿದವರು ಯಾರು ಗೊತ್ತೇ…?

Pinterest LinkedIn Tumblr

‘ಕೆಜಿಎಫ್‌: ಚಾಪ್ಟರ್‌ 2’ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ಕೇವಲ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಬಹು ನಿರೀಕ್ಷೆಯ ‘ಕೆಜಿಎಫ್ 2’ ಸಿನಿಮಾಕ್ಕೆ ಕಾದುಕುಳಿತಿದ್ದು, ಚಿತ್ರ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ರಾಕಿ ಬಾಯ್ ಹಾಗೂ ಅಧೀರ ಸಂಜಯ್ ದತ್ ನೋಡುವ ತವಕದಲ್ಲಿ ಸಿನಿಪ್ರಿಯರಿದ್ದಾರೆ.

ಇದಾದ ಬಳಿಕ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸ ಶುರುವಾಗಲಿದ್ದು, ಚಿತ್ರ ಬಿಡುಗಡೆ ದಿನಾಂಕ ಕೂಡ ಸದ್ಯದಲ್ಲೇ ರಿವೀಲ್ ಮಾಡುವ ಅಂದಾಜಿದೆ.

ಅಲ್ಲದೆ ಜನವರಿ 8ರಂದು ನಟ ಯಶ್ ಅವರ ಜನ್ಮದಿನ. ಹಾಗಾಗಿ, ಅಂದು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಮೊದಲ ಟೀಸರ್ ಅನ್ನು ರಿಲೀಸ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ನಡುವೆ ಕೆಜಿಎಫ್ ತಂಡದಿಂದ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದೆ. ಅದೇನಂದ್ರೆ ಬಾಲಿವುಡ್ ನಟ ಸಂಜಯ್ ದತ್ ಅಧೀರ ಪಾತ್ರಕ್ಕೆ ಧ್ವನಿ ನೀಡುವವರು ಯಾರು ಎಂಬುದು.

ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಕೆಜಿಎಫ್ ಸಿನಿಮಾ ತಯಾರಾಗುತ್ತಿದೆ. ಹೀಗಾಗಿ ಹಿಂದಿಯಲ್ಲಿ ಬಿಡುಗಡೆಯಾಗಲಿರುವ ಕೆಜಿಎಫ್​ಗೆ ಸ್ವತಃ ಸಂಜಯ್ ದತ್ ಅವರೇ ಡಬ್ ಮಾಡಿಲಿದ್ದಾರಂತೆ. ಕನ್ನಡಕ್ಕೆ..?

ಆದರೆ, ಕನ್ನಡ ಹಾಗೂ ತೆಲುಗಿನಲ್ಲಿ ದತ್​ಗೆ ಡಬ್ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಕನ್ನಡದಲ್ಲಿ ಮಧು ಗುರುಸ್ವಾಮಿ ಡಬ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ತೆಲುಗಿನಲ್ಲಿ ಕಂಚಿನ ಕಂಠದ ಬೊಮ್ಮಾಲಿ ಖ್ಯಾತಿಯ ರವಿಶಂಕರ್ ಡಬ್ ಮಾಡಲಿದ್ದಾರೆ.

ಇತ್ತೀಚೆಗಷ್ಟೆ ಯಶ್-ದತ್ ಇಬ್ಬರ ನಡುವೆ ರೋಚಕವಾದ ಫೈಟ್ ಕುದುರಿಸುವುದಕ್ಕೆ ಸಾಹಸ ನಿರ್ದೇಶಕ ಸೋದರರಾದ ಅನ್ಬರಿವ್ ಇತ್ತೀಚೆಗಷ್ಟೆ ಕೆಜಿಎಫ್ ಸೆಟ್ಗೆ ಕಾಲಿಟ್ಟಿದ್ದರು. ಈ ಬಗ್ಗೆ ಪ್ರಶಾಂತ್ ನೀಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು.

ಇನ್ನೂ ಯಶ್ ಹುಟ್ಟು ಹಬ್ಬಕ್ಕೆ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಬಿಗ್ ಸರ್ಪ್ರೈಸ್ ಕೊಟ್ಟಿರುವ ಚಿತ್ರತಂಡ, ಶೂಟಿಂಗ್ ಕ್ಲೈಮ್ಯಾಕ್ಸ್ ಹಂತ ತಲುಪಿರುವುದನ್ನು ಖುಷಿಯಾಗಿ ಹೇಳಿಕೊಂಡಿದೆ. ಜೊತೆಗೆ ಸಂಜಯ್ ದತ್ ಹಾಗೂ ಯಶ್ ನಡುವಿನ ಕ್ಲೈಮ್ಯಾಕ್ಸ್ ಫೈಟ್ ಹೇಗಿರುತ್ತದೆಂಬ ಕುತೂಹಲ ಹೆಚ್ಚುತ್ತಿದೆ.

ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾವು ಬಹುಭಾಷೆಯಲ್ಲಿ ತೆರೆಗೆ ಬರಲಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಜನವರಿ 8ರಂದು ನಟ ಯಶ್ ಅವರ ಜನ್ಮದಿನದಂದು ಮೊದಲ ಟೀಸರ್ ರಿಲೀಸ್ ಮಾಡುವ ಸಾಧ್ಯತೆಗಳಿವೆ.

ಯಶ್ಗೆ ಇಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದು, ರವೀನಾ ಟಂಡನ್ ಮತ್ತೊಂದು ಮುಖ್ಯ ಪಾತ್ರದಲ್ಲಿದ್ಧಾರೆ. ಹಾಡುಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.

Comments are closed.