ಕರಾವಳಿ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ವತಿಯಿಂದ ಆಟೋ ಚಾಲಕ ಮೊಂತು ಲೋಬೊರವರಿಗೆ ಮನೆ ದುರಸ್ತಿ ಹಾಗೂ ಆರೋಗ್ಯ ಕ್ಷೇಮಕ್ಕಾಗಿ ಧನ ಸಹಾಯ

Pinterest LinkedIn Tumblr

ಮಂಗಳೂರು : ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ದ ವತಿಯಿಂದ ಕಳೆದ 65 ವರ್ಷಗಳಿಂದ ಯಾವುದೇ ಅಪಘಾತ ಹಾಗೂ ಕೇಸ್‌ಗಳಿಲ್ಲದ ಹಿರಿಯ ಆಟೋ ಚಾಲಕ 85  ವರ್ಷ ಪ್ರಾಯದ ಮೊಂತು ಲೋಬೊರವರಿಗೆ ಮನೆ ದುರಸ್ತಿ ಹಾಗೂ ಆರೋಗ್ಯ ಕ್ಷೇಮಕಾಗಿ ಧನ ಸಹಾಯ ಮಾಡಲಾಯಿತು.

ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ವಂದನೀಯ ಮ್ಯಾಥ್ಯು ವಾಸ್, ಕಥೊಲಿಕ್ ಸಭೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತಾ, ಅಧ್ಯಕ್ಷರಾದ ಶ್ರೀ ಸ್ಟೇನೀ ಲೋಬೊ ರವರು 30,200೦ ರೂಪಾಯಿಯ ಚೆಕ್ಕನ್ನು ಮೊಂತು ಲೋಬೊ ರವರಿಗೆ ಹಸ್ತಾಂತರಿಸಿದರು.

ಮುಂದಿನ ದಿನಗಳಲ್ಲಿ ಕಥೊಲಿಕ್ ಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ಅವರ ಮನೆಯ ದುರಸ್ಥಿಯ ಸಂಪೂರ್ಣ ಖರ್ಚನ್ನು ಕೊಡುವುದಾಗಿ ಭರವಸೆ ನೀಡಿದರು.

ಸಮಿತಿಯ ಪದಾಧಿಕಾರಿಗಳಾದ ನಿಯೋಜಿತ ಅಧ್ಯಕ್ಷ  ಶ್ರೀ ರಾಜು ಸ್ಟೀಫನ್ ಡಿಸೋಜ, ಉಪಾದ್ಯಕ್ಷ  ಶ್ರೀ ಸ್ಟೀವನ್ ರೊಡ್ರಿಗಸ್, ಪ್ರಧಾನ ಕಾರ್‍ಯದರ್ಶಿ  ಶ್ರೀ ಅಲ್ಫೋನ್ಸ್ ಫೆರ್ನಾಂಡಿಸ್, ಕೋಶಾಧಿಕಾರಿ  ಕುಮಾರಿ ಮೆಲ್ರಿಡಾ ರೊಡ್ರಿಗಸ್ ಸಹ ಕಾರ್‍ಯದರ್ಶಿ  ಶ್ರೀ ದೀಪಕ್ ಡಿಸೋಜ,ಆಮ್ಚೊ ಸಂದೇಶ್ ಸಂಪಾದಕರಾದ ಶ್ರೀ ವಿಲ್‌ಫ್ರೆಡ್ ಲೋಬೊ ಉಪಸ್ಥಿತರಿದ್ದರು.

ಕಥೊಲಿಕ್ ಸಭೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತಾರವರು ಅವರ ಮನೆಗೆ ಬೇಟಿ ಮಾಡಿ ಮನೆ ಮತ್ತು ಕುಟುಂಬದ ಸಮಸ್ಯೆಯ ಬಗ್ಗೆ ಪರಿಶೀಲಿಸಿದರು.

Comments are closed.