ಮನೋರಂಜನೆ

ನನ್ನ ವಿಡಿಯೋಗೆ ಕೆಟ್ಟ ಕಾಮೆಂಟ್​ಗಳು ಬರುತ್ತಿವೆ: ಬಾಲಿವುಡ್​ ಗಾಯಕಿ!

Pinterest LinkedIn Tumblr


ಮುಂಬೈ: ನನ್ನ ನೂತನ ಮ್ಯೂಸಿಕ್​ ವಿಡಿಯೋಗೆ ಕೆಟ್ಟ ಕಾಮೆಂಟ್​ಗಳು ಹರಿದುಬರುತ್ತಿವೆ ಎಂದು ಬಾಲಿವುಡ್​ ಗಾಯಕಿ ಸೋನಾ ಮೋಹಪತ್ರ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸೋನಾ, ನನ್ನ ಇತ್ತೀಚಿನ ಮ್ಯೂಸಿಕ್​ ವಿಡಿಯೋಗೆ ಅನೇಕ ಕೆಟ್ಟ ಕಾಮೆಂಟ್​ಗಳು ಬರುತ್ತಿವೆ. ಕಾಮೆಂಟ್​ಗಳು ನನ್ನ ಮೀಟೂ ಆರೋಪದ ಬಗ್ಗೆ ಸಂಶಯ ವ್ಯಕ್ತಪಡಿಸುವ ರೀತಿಯಲ್ಲಿವೆ. ಅಲ್ಲದೆ, ನಾನು ತುಂಬಾ ಅಶ್ಲೀಲ ಉಡುಗೆಯನ್ನು ತೊಡುತ್ತೇನೆಂದು ಪರಿಗಣಿಸಿರುವ ನೆಟ್ಟಿಗರು, ತನ್ನೊಂದಿಗೆ ಪುರುಷರು ಅಶ್ಲೀಲವಾಗಿ ವರ್ತಿಸುವುದನ್ನು ಇಷ್ಟಪಡುವಂತಹ ಮಹಿಳೆ ಎಂದಿದ್ದಾರೆ. ಅಲ್ಲದೆ, ಈವರೆಗೂ ನಾನು ಹೇಳಿರುವುದು ಸುಳ್ಳೆಂದು ನಂಬಿರುವುದಾಗಿ ಕಾಮೆಂಟ್​ಗಳು ಬಂದಿವೆ ಎಂದು ಸೋನಾ ತಿಳಿಸಿದ್ದಾರೆ.

ಇನ್ನು ಕಳೆದ ತಿಂಗಳಲ್ಲಿ ಸೋನಾ #INeverAskForIt (ನೆವರ್​ ಆಸ್ಕ್​ ಫೊರ್ಲ್ಟ್​) ಅಭಿಯಾನಕ್ಕೆ ಸಾಥ್​ ನೀಡಿದ್ದರು. ಈ ಅಭಿಯಾನದಡಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ವಿರುದ್ಧವೇ ಜನರು ಮಾತನಾಡಿದ ಅನುಭವ ಹಂಚಿಕೊಳ್ಳಲು ಹೇಳಿದ್ದರು. ಅಲ್ಲದೆ, ಕಾಲೇಜು ದಿನಗಳಲ್ಲಿ ತನಗಾದ ಅನುಭವವನ್ನು ಟ್ವೀಟ್​ ಮೂಲಕ ತಿಳಿಸಿದ್ದರು.

ಸಾಮಾನ್ಯವಾಗಿ ಲೈಂಗಿಕ ದೌರ್ಜನ್ಯವಾದಾಗ ಆ ಸಮಯದಲ್ಲಿ ಯಾವ ಉಡುಗೆ ಧರಿಸಿದ್ದೆ ಎಂದು ಸಂತ್ರಸ್ತರನ್ನು ಕೇಳುತ್ತಾರೆ. ಅಂದರೆ, ಸಂತ್ರಸ್ತೆಯನ್ನೇ ದೂಷಿಸುತ್ತಾರೆ. ಇದೇ ವಿಚಾರದಲ್ಲಿ ಟ್ವೀಟ್​ ಮಾಡಿದ್ದ ಸೋನಾ, ನಾನು ಬಿಟೆಕ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿದ್ದ ಸಮಯದಲ್ಲಿ ಒಮ್ಮೆ ಮೈಕ್ರೋಪ್ರೊಸೆಸ್ಸರ್​ ಲ್ಯಾಬ್​ಗೆ ಹೋಗುತ್ತಿದ್ದೆ. ದೊಗಲವಾದ ಹಸಿರು ಖಾದಿ ಕುರ್ತಾ ಜತೆಗೆ ಸಲ್ವಾರ್ ತೊಟ್ಟಿದ್ದೆ. ಈ ವೇಳೆ ನಮ್ಮ ಸೀನಿಯರ್ ಶಿಳ್ಳೆ ಹೊಡೆಯುತ್ತಾ ನನ್ನ ಬ್ರಾ ಸೈಜ್​ ಬಗ್ಗೆ​​ ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಹಿತೈಶಿ ಒಬ್ಬರು ನನ್ನ ಬಳಿ ಬಂದರು. ಏಕೆ, ನನ್ನ ಸ್ತನಗಳು ಸಂಪೂರ್ಣ ಮುಚ್ಚಿರುವಂತೆ ನಾನು ದುಪ್ಪಟ್ಟವನ್ನು ಸರಿಯಾಗಿ ಧರಿಸಿಲ್ವಾ ಎಂದು ನನ್ನನ್ನೇ ದೂರಿದ್ದರು ಎಂದು ಸೋನಾ ತಿಳಿಸಿದ್ದರು.

ಮತ್ತೊಂದು ಟ್ವೀಟ್​ನಲ್ಲಿ ವಿಕ್ಟಿಮ್​ ಬ್ಲೇಮಿಂಗ್​ (ಬಲಿಪಶುವನ್ನೇ ದೂಷಿಸುವುದು) ಅನುಭವವನ್ನು ಶೇರ್​ ಮಾಡಿಕೊಳ್ಳಿ ಎಂದು ಬಾಲಿವುಡ್​ ನಟಿ, ಸೋನಮ್​ ಕಪೂರ್​, ಗಾಯಕಿ ಚಿನ್ಮಯಿ ಶ್ರೀಪಾದ ಮತ್ತು ಇತರೆ ಸೆಲಿಬ್ರೆಟಿಗಳಿಗೆ ಸೋನಾ ಟ್ಯಾಗ್​ ಮಾಡಿದ್ದರು. ನೀವು ಲೈಂಗಿಕ ಕಿರುಕುಳಕ್ಕೆ ಒಳಗಾದ ನೀವು ಧರಿಸಿದ್ದ ಬಟ್ಟೆ ಯಾವುದು ಎಂಬುದನ್ನು ನೆನೆಪಿಸಿಕೊಂಡು ವಿಕ್ಟಿಮ್​ ಬ್ಲೇಮಿಂಗ್ ಗಮನಕ್ಕೆ ತನ್ನಿ ಎಂದಿದ್ದರು. ​

ಇನ್ನು ಮೀಟೂ ಆರೋಪದ ವಿಚಾರಕ್ಕೆ ಬರುವುದಾದರೆ ಸೋನಾ ಅವರು ಅನು ಮಲಿಕ್​ ಮತ್ತು ಕೈಲಾಶ್​ ಖೇರ್​ ಸೇರಿದಂತೆ ಕೆಲವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

Comments are closed.