ಅಂತರಾಷ್ಟ್ರೀಯ

ತೃತೀಯ ಲಿಂಗಿ ತಂದೆಗೆ ಅಂಡಾಣು ನೀಡಿ ಮಗು ನೀಡ ಹೊರಟ ಸಲಿಂಗಿ ಪುತ್ರಿ!

Pinterest LinkedIn Tumblr


ಮ್ಯಾಂಚೆಸ್ಟರ್‌: ಇದೊಂದು ವಿಚಿತ್ರ ಸಂಸಾರ. ಇಲ್ಲಿ ಕಾಣುತ್ತಿರುವ ಯುವತಿಯ ಹೆಸರು ಸ್ಯಾಫ್ರನ್​. ಈಕೆಗೀಗ 21 ವರ್ಷ. ಈಕೆಯ ತಂದೆ ಬ್ಯಾರಿ ಡ್ರೂಯಿಟ್-ಬಾರ್ಲೋ ತೃತೀಯ ಲಿಂಗಿ. ಸ್ಯಾಫ್ರನ್​ನನ್ನು ಇವರು ದತ್ತು ಪಡೆದಿದ್ದು ಲಂಡನ್​ನ ಮೊದಲ ದ್ವಿತೀಯ ಲಿಂಗಿ ತಂದೆ ಎನಿಸಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ಬ್ಯಾರಿ ಅವರು ಸ್ಕಾಟ್​ ಹಚಿಸನ್​ ಎಂಬಾಕೆಯ ಮೂಲಕ ಬಾಡಿಗೆ ತಾಯ್ತನದಲ್ಲಿ ಒಂದು ಮಗು ಪಡೆದಿದ್ದಾರೆ. ಅಚ್ಚರಿ ಎಂದರೆ ಇದೇ ಸ್ಕಾಟ್​ ಸ್ಯಾಫ್ರನ್​ ಜತೆ ಡೇಟಿಂಗ್​ ಕೂಡ ಮಾಡಿದ್ದಾಳೆ. ಏಕೆಂದರೆ ಅಪ್ಪ ತೃತೀಯಲಿಂಗಿಯಾದರೆ ಸ್ಯಾಫ್ರನ್​ ಸಲಿಂಗಿ!
ಒಟ್ಟಿನಲ್ಲಿ ಈ ವಿಚಿತ್ರ ಸಂಸಾರದಲ್ಲಿ ಈಗ ಈ ಸಲಿಂಗಿ ಮಗಳು ಒಂದು ನಿರ್ಧಾರಕ್ಕೆ ಬಂದಿದ್ದಾಳೆ. ಅದೇನೆಂದರೆ ತನ್ನ ತಂದೆಗೆ ಅಂಡಾಣುದಾನ ಮಾಡುವ ಮೂಲಕ ಇನ್ನೊಂದು ಮಗುವನ್ನು ನೀಡಲು ಈಕೆ ನಿರ್ಧರಿಸಿದ್ದಾಳೆ.

ತನ್ನ ತಂದೆಗಾಗಿ ಅಂಡಾಣುವನ್ನು ಫ್ರೀಜ್​ ಮಾಡಿದ್ದಾಳೆ ಸ್ಯಾಫ್ರನ್​. ಇದೊಂದು ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆ. ಆದರೆ ನನ್ನ ತಂದೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಮಾತ್ರವಲ್ಲದೇ ನನ್ನ ಸ್ನೇಹಿತೆಯಾಗಿರುವ ಸ್ಕಾಟ್​ಳನ್ನೂ ಪ್ರೀತಿಸುತ್ತೇನೆ. ಆವರಿಬ್ಬರಿಗೂ ಒಂದು ಮಗು ನೀಡಲು ನಾನು ಬಯಸಿದ್ದೇನೆ ಎಂದಿದ್ದಾಳೆ ಸ್ಯಾಫ್ರನ್​.

ಇದಾಗಲೇ ನನ್ನ ಅಂಡಾಣುವನ್ನು ಫ್ರೀಜ್​ ಮಾಡಿ ಇಟ್ಟಿದ್ದೇನೆ. ಇದು ಸಕ್ಸಸ್​ ಆದರೆ ನನ್ನ ಅಪ್ಪ ಮತ್ತು ನನ್ನ ಸ್ನೇಹಿತೆ ಎರಡನೇ ಮಗುವಿನ ತಾಯಿಯಾಗಲಿದ್ದಾರೆ. ನನ್ನ ಮಗುವಿಗೆ ನನ್ನ ತಂದೆ ಅಜ್ಜನೂ ಹೌದು, ಅಪ್ಪನೂ ಹೌದು. ಇದೊಂದು ರೀತಿಯಲ್ಲಿ ವಿಶೇಷವಾಗಿದೆ ಎಂದಿದ್ದಾಳೆ ಸ್ಯಾಫ್ರನ್​.

ಒಟ್ಟಿನಲ್ಲಿ ಈ ಜಗತ್ತಿನಲ್ಲಿ ಏನೇನೋ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ನಮಗೆ ಅರಿವೇ ಇಲ್ಲದ, ಎಷ್ಟೊಂದು ಘಟನೆಗಳು, ಸಾಮಾನ್ಯ ಮನುಷ್ಯರು ಊಹಿಸಲೂ ಸಾಧ್ಯವಿಲ್ಲದ ವಿಚಿತ್ರ ಸಂಸಾರಗಳೂ ನಮ್ಮ ನಡುವೆಯೇ ಇದೆ ಎನ್ನುವುದಕ್ಕೆ ಇದೊಂದು ಉದಾಹರಣಯಷ್ಟೇ.

Comments are closed.