ರಾಷ್ಟ್ರೀಯ

ರಾಜೀವ್‌ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್‌ಗೆ ಗೋಲ್ವಾಲ್ಕರ್ ಹೆಸರು: ಸಚಿವ ಮುರಳೀಧರನ್ ಸಮರ್ಥನೆ

Pinterest LinkedIn Tumblr


ತಿರುವನಂತಪುರ : ಇಲ್ಲಿನ ರಾಜೀವ್‌ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್‌ಗೆ ಆರ್‌ಎಸ್‌ಎಸ್‌ ಚಿಂತಕ ಎಂ.ಎಸ್‌. ಗೋಲ್ವಾಲ್ಕರ್ ಅವರ ಹೆಸರಿಡುವ ನಿರ್ಧಾರವನ್ನು ಕೇಂದ್ರ ಸಚಿವ ವಿ.ಮುರಳೀಧರನ್ ಅವರು ಸಮರ್ಥಿಸಿಕೊಂಡಿದ್ದಾರೆ.

ಗೋಲ್ವಾಲ್ಕರ್ ಹೆಸರಿಡುವ ಕೇಂದ್ರ ಸರ್ಕಾರದ ತೀರ್ಮಾನವು ವಿವಾದಕ್ಕೆ ಆಸ್ಪದವಾದ ಹಿಂದೆಯೇ ಈ ಕುರಿತು ಹೇಳಿಕೆ ನೀಡಿರುವ ಅವರು, ‘ಕ್ಯಾಂಪಸ್‌ಗೆ ದೇಶಭಕ್ತನ ಹೆಸರಿಡುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ.

ಗೋಲ್ವಾಲ್ಕರ್ ಅವರು ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು ಎಂದು ಹೇಳಿದ ಅವರು, ‘ಬೋಟ್‌ ರೇಸ್‌ಗೆ ಮಾಜಿ ಪ್ರಧಾನಿ ಜವಹರಲಾಲ್‌ ನೆಹರೂ ಹೆಸರಿಟ್ಟಿದ್ದು ಏಕೆ. ನೆಹರೂ ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ’ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.

Comments are closed.