ರಾಷ್ಟ್ರೀಯ

ಹೆಣ್ಣು ಮಗುವನ್ನು ಹೆತ್ತಿದ್ದಕ್ಕಾಗಿ ಪತ್ನಿಯ ಪೋಷಕರಿಂದ ನಿರ್ವಹಣೆಗಾಗಿ 30 ಸಾವಿರ ಕೇಳಿದ ಪತಿ!

Pinterest LinkedIn Tumblr


ಥಾಣೆ: ಹೆಣ್ಣು ಮಗುವನ್ನು ಹೆತ್ತಿದ್ದಕ್ಕಾಗಿ ಪತ್ನಿಗೆ ಕಿರುಕುಳ ನೀಡಿದ ಮತ್ತು ಮಗುವಿನ ಆರೈಕೆಗಾಗಿ ಪತ್ನಿಯ ಪೋಷಕರಿಂದ ₹ 30,000 ‘ನಿರ್ವಹಣೆ’ಗಾಗಿ ಒತ್ತಾಯಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಮೂಲದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿಯನ್ನು ಹೊರತುಪಡಿಸಿ ಆತನ ಪೋಷಕರ ಮೇಲೂ ಕೂಡ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ರ (ಮಹಿಳೆಯ ಪತಿ ಅಥವಾ ಗಂಡನ ಸಂಬಂಧಿಕರು ಆಕೆಯ ಮೇಲೆ ದೌರ್ಜನ್ಯ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

21 ವರ್ಷದ ಮಹಿಳೆಯು ಹೆಣ್ಣು ಮಗು ಹೆತ್ತಿದ್ದಕ್ಕಾಗಿ ಆರೋಪಿಗಳು ಕಿರುಕುಳ ನೀಡುತ್ತಿದ್ದರು. ಆರೋಪಿಗಳನ್ನು ದಿಲ್ಶಾದ್ ಗಬಾ ಮೊಮಿನ್, ಸೋನು ಗಬಾ ಮೊಮಿನ್ ಮತ್ತು ನೌಶಾದ್ ಮೊಮಿನ್ ಎಂದು ಗುರುತಿಸಲಾಗಿದೆ. ಮಗುವಿನ ನಿರ್ವಹಣೆಗಾಗಿ ತಮ್ಮ ಪೋಷಕರಿಂದ 30 ಸಾವಿರ ಹಣವನ್ನು ತರುವಂತೆ ಒತ್ತಾಯಿಸುತ್ತಿದ್ದರು.

ಈ ಪ್ರಕರಣದಲ್ಲಿ ಸದ್ಯ ಪೊಲೀಸರು ಯಾರನ್ನೂ ಬಂಧಿಸಿಲ್ಲ.

Comments are closed.