
ನಟಿ ಸಾಯಿ ಪಲ್ಲವಿ ಎಷ್ಟೋ ಹುಡುಗರಿಗೆ ಹುಚ್ಚು ಹಿಡಿಸಿದ ನಾಯಕಿ. ಮೇಕಪ್ ಇಲ್ಲದೆ ಅಂದವನ್ನು ಪ್ರದರ್ಶಿಸಿ, ಸೈ ಎನ್ನಿಸಿಕೊಂಡ ನ್ಯಾಚುರಲ್ ಬ್ಯೂಟಿ, ಅದಕ್ಕೂ ಮಿಗಿಲಾಗಿ ಈ ಮಲರ್ ಟೀಚರ್ ಸೂಪರ್ ಡ್ಯಾನ್ಸರ್.
ರೌಡಿ ಬೇಬಿ ಸಾಂಗ್ ನೋಡಿ ಅದೆಷ್ಟೋ ಪಡ್ಡೆಹೈಕ್ಳು ಕಳೆದು ಹೋಗಿದ್ರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕ್ರೇಜ್ ಸೃಷ್ಟಿಸಿತ್ತು ಈ ಸಾಂಗ್. ಸೋಷಿಯಲ್ ಮೀಡಿಯಾದಲ್ಲಂತೂ ಕೇಳಲೇಬೇಡಿ ಇದೇ ಹಾಡಿನದ್ದೇ ಗುಂಗು. ಅದ್ರಲ್ಲೂ ಬರ್ಜದಸ್ತ್ ಸ್ಟೆಪ್ಸ್ ಹಾಕಿ ಎಲ್ಲರನ್ನ ಅಟ್ರ್ಯಾಕ್ಟ್ ಮಾಡಿದ್ಲು ಪಿಂಪಲ್ ಸುಂದ್ರಿ,
ಸಾಯಿಪಲ್ಲವಿ ಯಾವುದೇ ಭಾಷೆ ಸಿನಿಮಾದಲ್ಲಿ ನಟಿಸಲಿ, ಅವ್ರ ಅಭಿಮಾನಿಗಳು ಈ ಬ್ಯೂಟಿಯ ಅಂದವನ್ನ ಕಣ್ತುಂಬಿಕೊಳ್ಳೋಕೆ ಆದ್ರು ಆ ಸಿನಿಮಾ ನೋಡ್ತಾರೆ. ಅಷ್ಟೆ ಅಲ್ಲದೆ ಈ ಸುಂದರಿಯ ಪ್ರತಿಯೊಂದು ಸಿನಿಮಾಗಳು ಬಾಕ್ಸ್ ಆಫಿಸ್ನಲ್ಲಿ ಸಖತ್ ಸದ್ದು ಮಾಡಿವೆ. ಹೀಗಾಗಿ ಸದ್ಯ ಟಾಲಿವುಡ್ನ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಈ ಮಲ್ಲುಕುಟ್ಟಿ ಫುಲ್ ಬ್ಯುಸಿ. ನಾಗಚೈತನ್ಯ ನಟನೆಯ ಲವ್ ಸ್ಟೋರಿ ಸಿನಿಮಾಗೆ ಹಾಗೂ ರಾಣ ದಗ್ಗುಬಾಟಿಯ ‘ವಿರಾಟ ಪರ್ವಂ’ ಚಿತ್ರಕ್ಕೂ ಈ ಬ್ಯೂಟಿಯೇ ನಾಯಕಿ.
ಯಸ್ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಮೂಲಕ ನಾನಿ ಜೊತೆ ಮತ್ತೆ ಡ್ಯುಯೇಟ್ ಹಾಡುವಂತೆ ಸಾಯಿ ಪಲ್ಲವಿಗೆ ಆಫರ್ ಹೋಗಿದೆ. ಹೀಗಾಗಿ ಈ ಮಲ್ಲು ಕುಟ್ಟಿ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 2 ಕೋಟಿ ಡಿಮ್ಯಾಂಡ್ ಮಾಡ್ತಿದ್ದಾರೆ.
Comments are closed.