
ನವದೆಹಲಿ: 2 ದಿನಗಳ ಕುಸಿತದ ನಂತರ, ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತೆ ಏರಿಕೆಯಾಗಿದೆ.
ಇಂದಿನ ವ್ಯವಹಾರ ಆರಂಭವಾಗುತ್ತಲೇ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ (2020 ರ ಸೆಪ್ಟೆಂಬರ್ 18 ರಂದು ಚಿನ್ನದ ಬೆಲೆ(Gold Rate) 224 ರೂ. ಏರಿಕೆಯಾಗಿ 10 ಗ್ರಾಂಗೆ 52,672 ರೂ. ತಲುಪಿದೆ. ಇದೇ ಸಮಯದಲ್ಲಿ ಬೆಳ್ಳಿಯ ಬೆಲೆ (Silver Rate) 620 ರೂ.ಗಳಿಂದ ಏರಿಕೆಯಾಗಿ ಪ್ರತಿ ಕೆ.ಜಿ.ಗೆ 69,841 ರೂ.ಗೆ ತಲುಪಿದೆ. ಗುರುವಾರ, ಚಿನ್ನ ಮಾತ್ರವಲ್ಲ, ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತಕಂಡುಬಂದಿತ್ತು. ಗುರುವಾರ ಬೆಳ್ಳಿಯ ಬೆಲೆ ಕೆ.ಜಿ.ಗೆ 1,214 ರೂ.ನಷ್ಟು ಇಳಿಕೆಯಾಗಿತ್ತು.
HDFC ಸೆಕ್ಯೂರಿಟಿ ಅನುಸಾರ ಚಿನ್ನದ ಬೆಲೆ ಇಂದು ಪ್ರತಿ 10 ಗ್ರಾಂ.ಗೆ ರೂ.224ರಷ್ಟು ಏರಿಕೆಯಾಗಿ ರೂ.52,672ಕ್ಕೆ ತಲುಪಿದೆ. ಇದರ ಹಿಂದಿನ ಅವಧಿಯಲ್ಲಿ ಅಂದರೆ ಕಳೆದ ಗುರುವಾರ ಚಿನ್ನದ ಬೆಲೆ ಪ್ರತಿ 10ಗ್ರಾಂ.ಗೆ ರೂ. 608 ರಷ್ಟು ಇಳಿಕೆಯಾಗಿ 52,463ಕ್ಕೆ ತಲುಪಿತ್ತು. ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 1,954 US ಡಾಲರ್ ನಷ್ತಿತ್ತು.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಬೆಳ್ಳಿ 620 ರೂ. ಏರಿಕೆಯಾಗಿ ಪ್ರತಿ ಕೆ.ಜಿ.ಗೆ 69,841 ರೂ.ಗೆ ತಲುಪಿದೆ. ಗುರುವಾರ ನಡೆದ ವಹಿವಾಟಿನ ನಂತರ ಬೆಳ್ಳಿ 1,214 ರೂ.ಗಳಿಂದ ಇಳಿದು ಪ್ರತಿ ಕೆ.ಜಿ.ಗೆ 69,242 ರೂ. ತಲುಪಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಪ್ರತಿ ಔನ್ಸ್ ಗೆ 27.13 ಡಾಲರ್ ರಷ್ಟಿತ್ತು.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಕಮೊಡಿಟಿ) ತಪನ್ ಪಟೇಲ್ ಅವರು ಹೇಳುವ ಪ್ರಕಾರ, ಅಂತರರಾಷ್ಟ್ರೀಯ ಬೆಲೆಗಳ ಏರಿಕೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಬಲವರ್ಧನೆಯ ಕಾರಣ ಈ ಪರಿಣಾಮ ಕಂಡುಬಂದಿದೆ ಎಂದಿದ್ದಾರೆ.
Comments are closed.