
ಬೆಂಗಳೂರು: ನಟ ಚಿರು ಸರ್ಜಾರವರ ನೆನಪಿಗಾಗಿ ಮೇಘನಾರಾಜ್ ಗಾಗಿ ಚಂದನ್ ಶೆಟ್ಟಿ ಹಾಡಿರುವ ಹಾಡು ಭಾರಿ ವೈರಲ್ ಆಗಿದೆ.
ತಮ್ಮ ಕನಸಿನ ಮುದ್ದು ಮಗುವ ನಿರೀಕ್ಷೆಯಲ್ಲಿದ್ದ ಚಂದನವನದ ಕ್ಯೂಟ್ ಜೋಡಿ, ಚಿರು ಸರ್ಜಾ ಹಾಗೂ ಮೇಘನಾ ರಾಜ್. ವಿಧಿಯಾಟದದಿಂದಾಗಿ ಚಿರು ತುಂಬು ಗರ್ಭಣಿ ಮೇಘನಳನ್ನು ಒಬ್ಬಂಟಿ ಮಾಡಿ ಮುಗುವಿನ ಮುಖನೋಡುವ ಮುನ್ನವೇ ಚಿರ ನಿದ್ರೆಗೆ ಜಾರಿದರು. ಪ್ರೀತಿಯ ಪತಿ ಇಲ್ಲದೆ ಮೇಘನಾ ಪ್ರತಿ ದಿನ ಕ್ಷಣ ಕ್ಷಣಕ್ಕೂ ನಿದ್ದೆಗಣ್ಣಿನಲ್ಲಿಯೂ ಚಿರು ಚಿರು ಅಂತ ಕನವರಿಸುತ್ತಿದ್ದರು. ನೋವಿನಲ್ಲಿರುವ ಕುಟುಂಬಸ್ಥರು ಸ್ವಲ್ಪ ಸ್ಲಲ್ಪವೇ ಚೇತರಿಸಿಕೊಳ್ಳುತ್ತಿದ್ದಾರೆ.
ಚಿರು ಅಗಲಿಕೆ ನಂತರ ಮೇಘನಾ ರಾಜ್ ಅವರನ್ನು ಹಲವಾರು ಸಿನಿಮಾ ಬಂಧುಗಳು, ಸ್ನೇಹಿತರು ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಭೇಟಿ ಮಾಡಿ ಮಾತನಾಡಿ ಸಂತೈಸಿದ್ದಾರೆ.
ಇದೀಗ ರ‍್ಯಾಪರ್ ಚಂದನ್ ಶೆಟ್ಟಿ ಚಿರು ಸರ್ಜಾ ಹಾಗು ಮೇಘನಾ ರಾಜ್ ಅವರಿಗೋಸ್ಕರ ಒಂದು ಅದ್ಭುತವಾದ ಹಾಡನ್ನು ಮಾಡಿದ್ದಾರೆ. ಸದ್ಯ ಈ ಸಾಂಗ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದ್ದು. ಚಂದನ್ ಶೆಟ್ಟಿ ಅವರ ಈ ಹೊಸ ಹಾಡಿನಲ್ಲಿ ಚಿರು ಹಾಗು ಮೇಘನಾ ರಾಜ್ ಅವರನ್ನು ಸ್ಕೆಚ್ ರೂಪದಲ್ಲಿ ತೋರಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಕತ್ ಸದ್ದು ಮಾಡ್ತಿದ್ದು. ಖುದ್ದು ಚಂದನ್ ಶೆಟ್ಟಿ ಅವರೇ ಇದನ್ನು ಬರೆದು ಹಾಡಿದ್ದಾರೆ. ವಿಶೇಷ ಅಂದರೆ ಚಂದನ್ ತಮ್ಮ ಹುಟ್ಟು ಹಬ್ಬದಂದು ಚಿರುಗಾಗಿ ಈ ಹಾಡನ್ನು ಹಾಡಿದ್ದಾರೆ.
ಸದ್ಯ ಸೊಷಿಯಲ್ ಮೀಡಿಯಾದಲ್ಲಿ ಚಂದನ್ ಅವರು ಚಿರು ಮತ್ತು ಮೇಘನಾರವರಿಗೋಸ್ಕರ ಮಾಡಿರುವ ಅದ್ಭುತವಾದ ಹಾಡು ಸಖತ್ ವೈರಲ್ ಆಗುತ್ತಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Comments are closed.