ಮನೋರಂಜನೆ

ಜಯಾ ಬಚ್ಚನ್ ವಿರುದ್ಧ ವಾ#ಗ್ದಾಳಿ ನಡೆಸಿದ ಬಾಲಿವುಡ್ ನಟಿ ಕಂಗನಾ ರನೌತ್

Pinterest LinkedIn Tumblr


ನವದೆಹಲಿ:ಬಾಲಿವುಡ್ ಡ್ರ#ಗ್ಸ್ ಜಾಲದ ನಂಟಿನ ಕುರಿತು ಆಡಳಿತಾರೂಢ ಶಿವಸೇನಾ ಸರ್ಕಾರ ಹಾಗೂ ಬಾಲಿವುಡ್ ನಟರ ವಿರುದ್ಧ ವಾ#ಗ್ದಾಳಿ ನಡೆಸುತ್ತಿದ್ದ ನಟಿ ಕಂಗನಾ ರನೌತ್ ಇದೀಗ ಹಿರಿಯ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ವಿರುದ್ಧ ಚಾಟಿ ಬೀಸಿದ್ದಾರೆ.

ಮಂಗಳವಾರ (ಸೆಪ್ಟೆಂಬರ್ 15, 2020) ರಾಜ್ಯಸಭೆಯಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಕೆಲವು ವ್ಯಕ್ತಿಗಳು ಸಿನಿಮಾ ಇಂಡಸ್ಟ್ರಿಯ ಹೆಸರನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಜಯಾ ಅವರು ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಂಗನಾ ಟ್ವೀಟ್ ಮೂಲಕ ಕಟುವಾಗಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.

“ಜಯಾ ಜೀ ಒಂದು ವೇಳೆ ನಿಮ್ಮ ಮಗಳು ಶ್ವೇತಾ ಮಾ#ದಕ ವ್ಯ#ಸನಿಯಾಗಿ ಕಿರುಕುಳಕ್ಕೊಳಗಾಗಿದ್ದರೆ . ಒಂದು ವೇಳೆ ಅಭಿಷೇಕ್ ನಿರಂತರವಾಗಿ ಬೆದರಿಕೆ ಹಾಕಿ, ಕಿರು#ಕುಳ ನೀಡಿ, ಒಂದು ದಿನ ನೇ#ಣು ಬಿ#ಗಿದುಕೊಂಡಿದ್ದರೆ ನೀವು ಆಗಲೂ ಇದೇ ಮಾತನ್ನು ಹೇಳುತ್ತಿದ್ದೀರಾ? ಇತರರಿಗೂ ಸಹಾನುಭೂತಿ ತೋರಿಸಿ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಜಯಾ ಬಚ್ಚನ್ ಅವರು ಯಾರ ಹೆಸರನ್ನೂ ಉಲ್ಲೇಖಿಸದೇ ಬಿಜೆಪಿ ಸಂಸದ, ನಟ ರವಿ ಕಿಶನ್ ವಿರುದ್ಧ ವಾ#ಗ್ದಾಳಿ ನಡೆಸಿದ್ದರು. ರವಿ ಕಿಶನ್ ಅವರು ಸೋಮವಾರ ಲೋಕಸಭೆಯಲ್ಲಿ ಬಾಲಿವುಡ್ ನ ಡ್ರ#ಗ್ಸ್ ಜಾಲದ ಬಗ್ಗೆ ಹೇಳಿಕೆ ನೀಡಿದ್ದರು.

Comments are closed.