ಮನೋರಂಜನೆ

ನಾವು ತಪ್ಪಿಸಿಕೊಂಡಿಲ್ಲ, ಇಂದು ವಿಚಾರಣೆಗೆ ಒಳಪಡುತ್ತೇವೆ: ನಟಿ ಐಂದ್ರಿತಾ ರೇ

Pinterest LinkedIn Tumblr


ಬೆಂಗಳೂರು: ಕನ್ನಡ ಚಿತ್ರರಂಗದ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಇಂದು (ಬುಧವಾರ) ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ನಟಿ ಐಂದ್ರಿತಾ ರೇ ಹಾಗೂ ದಿಗಂತ್ ದಂಪತಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ದಂಪತಿ ಇರಲಿಲ್ಲವಾದ ಕಾರಣ ಹಾಗೂ ದೂರವಾಣಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸ್ಟಾರ್ ದಂಪತಿ ಪರಾರಿಯಾಗಿದ್ದಾರೆಯೇ? ತಲೆಮರೆಸಿಕೊಂಡಿದ್ದಾರೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಈ ಬಗ್ಗೆ ಸ್ವತಃ ನಟಿ ಐಂದ್ರಿತಾ ಹಾಗೂ ದಿಗಂತ್ ಸ್ಪಷ್ಟನೆ ನೀಡಿದ್ದು, ‘ಸಿಸಿಬಿಯಿಂದ ದೂರವಾಣಿ ಮೂಲಕ ನಮಗೆ ನೋಟಿಸ್‌ ಬಂದಿದೆ. ನಾಳೆ (ಸೆ.16) ಬೆಳಗ್ಗೆ 11 ಗಂಟೆಗೆ ವಿಚಾರಣೆ ಇದೆ. ನಾವು ಅಲ್ಲಿಗೆ ಹಾಜರಾಗಿ ಸಿಸಿಬಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಶೇಕ್ ಫಾಝಿಲ್ ಹೆಸರು ಮುಖ್ಯವಾಗಿ ಕೇಳಿಬಂದಿದೆ. ಇನ್ನು ಪ್ರಕರಣ ಬೆಳಕಿಗೆ ಬಂದ ನಂತರ ಫಾಝಿಲ್ ತಲೆ ಮರೆಸಿಕೊಂಡಿದ್ದಾನೆ. ಆದರೆ ಫಾಝಿಲ್ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಇದೀಗ ನಟಿ ಐಂದ್ರಿತಾ ರೇ ಮತ್ತು ದಿಗಂತ್ ಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

Comments are closed.