
ಬೆಂಗಳೂರು: ಸ್ಯಾಂಡಲ್ ವುಡ್ ನಂತರ ಕಿರುತೆರೆಗೂ ಡ್ರಗ್ ಮಾಫಿಯಾ ಲಿಂಕ್ ಹೊಂದಿರುವುದು ಇದೀಗ ಬಯಲಿಗೆ ಬಂದಿದೆ.
ಇದರ ನಡುವೆಯೇ ನಶೆ ಮಾಫಿಯಾ ಲಿಂಕ್ ಕಿರುತೆರೆಯನ್ನು ಫುಲ್ ಶೇಕ್ ಮಾಡುತ್ತಿದೆ. ಡ್ರಗ್ಸ್ ಮಾಫಿಯಾದ ಆರೋಪದಡಿ ಶೇಖ್ ಫಾಜಿಲ್ ಬಂಧಿತನಾಗುತ್ತಿದ್ದಂತೆ, ಸಭೆ ಸಮಾರಂಭಗಳಲ್ಲಿ ಶೇಖ್ ಫಾಜಿಲ್ ಜೊತೆ ಕಿರುತೆರೆಯ ಫೇಮಸ್ ನಟ ನಟಿಯರಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹಲವು ಅನುಮಾನಾಸ್ಪದ ಪ್ರಶ್ನೆಗೆ ಎಡೆಮಾಡಿಕೊಡುತ್ತಿದೆ.
ಸಭೆಯೊಂದರಲ್ಲಿ ಶೇಖ್ ಫಾಜಿಲ್ ನೊಂದಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿನಿಯ ನಟಿ ಶ್ವೇತಾ ಆರ್ ಪ್ರಸಾದ್, ‘ಗಟ್ಟಿಮೇಳ’ ಖ್ಯಾತಿಯ ರಕ್ಷ್ , ಹಾಗು ‘ಅಗ್ನಿಸಾಕ್ಷಿ’ ಖ್ಯಾತಿಯ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ.
ರಾಧಾ ರಮಣ ಧಾರವಾಹಿನಿಯಲ್ಲಿ ನಟಿಸಿ ರಾಧಾ ಮಿಸ್ ಎಂದೇ ಮನೆಮಾತಾಗಿರುವ ನಟಿ ಶ್ವೇತಾ ಸಾಕಷ್ಟು ಅಭಿಮಾನಿಗಳನ್ನೊಂದಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಬಣ್ಣ ಹಚ್ಚಿರುವ ಶ್ವೇತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವಾಗಿರುತ್ತಾರೆ. ಡ್ರಗ್ಸ್ ಪೆಡ್ಲರ್ ಜೊತೆ ಕಿರುತೆರೆ ನಟ ನಟಿಯರು ಪಾರ್ಟಿ ಮಾಡಿದ್ದರು ಎಂಬ ಟೀಕೆ ವ್ಯಕ್ತವಾಗುತ್ತಿದ್ದಂತೆ, ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕುವುದರ ಮೂಲಕ ಸಮಾಜಿಕ ಜಾಲತಾಣದಲ್ಲಿಯೇ ನಟಿ ಶ್ವೇತಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
“ನಾನು ಗ್ರೂಪ್ ನಲ್ಲಿ ಕಾಣಿಸಿಕೊಂಡ ಫೋಟೋವೊಂದು ಮಾಧ್ಯಮದಲ್ಲಿ ಹರಿದಾಡುತ್ತಿರುವುದನ್ನು ನೋಡಿದೆ. ನಾನು ಅದನ್ನು ನೋಡಿ ನಕ್ಕಿದೆ. ಅಲ್ಲದೆ ತುಂಬಾ ಕೆಳಮಟ್ಟದ ಪದಗಳನ್ನು ಬಳಸಿದ್ದರು. ಅದು ನನಗೆ ತುಂಬಾ ಕಿರಿಕಿರಿ ಮಾಡಿತು. ಆದರೆ ನಾನು ಪ್ರತಿಕ್ರಿಯೆ ನೀಡಲಿಲ್ಲ. ತುಂಬಾ ಕಂಟ್ರೋಲ್ ಮಾಡಿಕೊಂಡೆ. ಯಾಕಂದ್ರೆ ಇಲ್ಲಿ ಯಾರು ಕೂಡ ಪರ್ಫೆಕ್ಟ್ ಅಲ್ಲ. ಇದನ್ನೆ ಇನ್ನಷ್ಟು ಹುಡುಕಿ ಹೈಲೆಟ್ ಮಾಡುತ್ತಾರೆ.” ಎಂದು ಕಿಡಿಕಾರಿದ್ದಾರೆ.
Comments are closed.