
ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರನ್ನು ಕೇಂದ್ರವಿರಿಸಿಕೊಂಡು ಡೀಲ್ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳು ಹಣ ಗಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ನಟ-ನಟಿಯರು, ಡ್ರಗ್ಸ್ ಪೆಡ್ಲರ್ ಗಳ ವಿರುದ್ದ ಸಿಸಿಬಿ ಪ್ರಬಲ ಸಾಕ್ಷಗಳನ್ನು ಕಲೆ ಹಾಕುತ್ತಿದೆ.
ಈಗಾಗಲೇ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಮೂರು ತಂಡಗಳು ಫೀಲ್ಡಿಗೆ ಇಳಿದಿದೆ. ಒಂದು ತಂಡ ನಟಿಯರನ್ನು ಹಾಗೂ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ. 2ನೇ ತಂಡ ಬಂಧಿತ ಬೇರೆ ಆರೋಪಿಗಳ ವಿಚಾರಣೆ ಹಾಗೂ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದೆ. 3ನೇ ತಂಡ ಪೇಪರ್ ವರ್ಕ್ ಹಾಗು ಸಾಕ್ಷಗಳನ್ನುಕಲೆ ಹಾಕುವ ಕಾರ್ಯಚರಣೆಯನ್ನು ನಡೆಸುತ್ತಿದೆ.. ಹಾಗಾಗಿ ಡೀಲ್ ನಲ್ಲಿದ್ದ ಸೆಲೆಬ್ರೆಟಿಗಳು ಹಾಗು ಆರೋಪಿಗಳ ವಿರುದ್ಧ ಸಾಕ್ಷಗಳನ್ನು ಕಲೆ ಹಾಕಲು ಸಿಸಿಬಿ ಸದ್ದಿಲ್ಲದೇ ಹುಡುಕಾಟ ನಡೆಸಿದೆ.
ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ತಂಡ ನಟ-ನಟಿಯರ ಅಕೌಂಟ್ ಡಿಟೈಲ್ಸ್ ಮೇಲೆ ಕಣ್ಣಿಟ್ಟಿದೆ. ನಟ ನಟಿಯರ ಅಕೌಂಟ್ ಗೇ ಹಣ ಬಂದಿರೋ ಮಾಹಿತಿಯನ್ನು ಕಲೆ ಹಾಕಿರೋ ಸಿಸಿಬಿ ತಂಡ ಅವರ ಅಕೌಂಟ್ ಡಿಟೈಲ್ಸ್ ಪಡೆಯುತ್ತಿದೆ. ಯಾಕಂದ್ರೆ ಸಿನಿಮಾಗಳೇ ಇಲ್ಲದ ಟೈಂನಲ್ಲೂ ಈ ನಟ-ನಟಿಯರು ಐಷಾರಾಮಿ ಕಾರ್, ಪ್ಲಾಟ್, ಡೈಮಂಡ್ ಅಂತ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ಇದೆಲ್ಲಾ ಡ್ರಗ್ಸ್ ಕಿಂಗ್ ಪಿನ್ ಗಳ ಹಣ ಅನ್ನೋದು ಸಿಸಿಬಿಯ ತನಿಖೆಯಲ್ಲಿ ಕಂಡು ಬಂದಿದೆ. ಹಾಗಾಗಿ ಸಿಸಿಬಿ ತಂಡ ನಟ-ನಟಿಯರ ಅಕೌಂಟ್ ಡಿಟೈಲ್ಸ್ ಕ್ಯಾಚ್ ಮಾಡೋಕೆ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಡ್ರಗ್ಸ್ ಪೆಡ್ಲರ್ ಗಳ ಜೊತೆ ಲಿಂಕ್ ನಲ್ಲಿದ್ದ ಕೆಲ ನಟ-ನಟಿಯರ ಲಿಸ್ಟ್ ಸಿಸಿಬಿ ಬಳಿಯಿದೆ. ಯಾವಾಗ ಸಿಸಿಬಿ ನಮ್ಮ ಮನೆ ರೇಡ್ ಮಾಡುತ್ತೇ ಅನ್ನೋ ಭಯದಲ್ಲಿ ನಟಿಯರು ಊರು ಬಿಟ್ಟಿದ್ದಾರೆ..
Comments are closed.