ಅಂತರಾಷ್ಟ್ರೀಯ

ಮತದಾನದ ವೇಳೆ ಎಲ್ಲರ ಎದುರು ಬಟ್ಟೆ ಬಿಚ್ಚಿದ ಮಹಿಳೆ…!

Pinterest LinkedIn Tumblr


ನ್ಯೂ ಹ್ಯಾಂಪ್​ಶೈರ್​: ಇಲ್ಲಿನ ಮತಗಟ್ಟೆಯಲ್ಲಿ ಮಹಿಳೆಯೊಬ್ಬಳು ಮತದಾನದ ಸಂದರ್ಭ ಎಲ್ಲರ ಎದುರು ಬಟ್ಟೆ ಬಿಚ್ಚಿದ ಘಟನೆ ಭಾರೀ ವೈರಲ್ ಆಗಿದೆ.

ಮತದಾನದ ವೇಳೆ ಮತಗಟ್ಟೆಯಿಂದ ನೂರು ಮಿಟರ್​ ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗೆ ಅವಕಾಶವಿರುವುದಿಲ್ಲ. ಪ್ರಚಾರವಂತೂ ಮಾಡುವಂತೆಯೇ ಇಲ್ಲ.

ಆದರೆ, ನ್ಯೂ ಹ್ಯಾಂಪ್​ಶೈರ್​ನ ಎಕ್ಸ್​ಟರ್​ ಎಂಬಲ್ಲಿ ರಾಜಕೀಯ ಬರಹವಿದ್ದ ಶರ್ಟ್​ ಧರಿಸಿದ್ದಕ್ಕೆ ಮತದಾನಕ್ಕೆ ಅವಕಾಶವಿಲ್ಲವೆಂದು ಮಹಿಳೆಗೆ ಅಧಿಕಾರಿ ತಡೆಯೊಡ್ಡಿದ್ದಾರೆ. ಆಕೆ ಧರಿಸಿದ್ದ ಶರ್ಟ್​ ಮೇಲೆ ಮ್ಯಾಕ್​ ಕ್ಯಾನ್​ ಹಿರೋ ಟ್ರಂಪ್​ ಝಿರೋ ಎಂದು ಬರೆದಿತ್ತು. ಟ್ರಂಪ್ ಝಿರೋ ಎಂದು ಬರೆದಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿ ಮಹಿಳೆಗೆ ತಿಳಿಸಿದ್ದಾರೆ.

ಇದರಿಂದ ಕೋಪಗೊಂಡ ಮಹಿಳೆ, ನಾನು ಶರ್ಟ್​ ತೆಗೆಯಬೇಕೆಂದು ಬಯಸುತ್ತೀರಾ? ನಾನು ಒಳಗಡೆ ಏನನ್ನೂ ಧರಿಸಿಲ್ಲ ಎನ್ನುತ್ತಾಳೆ ಶರ್ಟ್​ ಕಳಚಿದ್ದಾಳೆ. ಅಲ್ಲಿದ್ದವರು ಬೆರಗುಗಣ್ಣಿನಿಂದಲೇ ನೋಡುತ್ತಲೇ ಇದ್ದರು. ಬಳಿಕ ತನ್ನ ಹಕ್ಕನ್ನು ಚಲಾಯಿಸಿ ಅಲ್ಲಿಂದ ತೆರಳಿದ್ದಾಳೆ.

ಆಕೆ ಬಟ್ಟೆಯನ್ನು ಕಳಚಿ ಮತದಾನ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿರಲಿಲ್ಲ. ನಾವು ಏನೂ ಹೇಳುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಬಟ್ಟೆ ಕಳಚಿದ್ದಾಳೆ ಎಂದು ಅಧಿಕಾರಿ ಹೇಳಿದ್ದಾರೆ.

Comments are closed.