ಮನೋರಂಜನೆ

ನಟ ಸುಶಾಂತ್​​ ಶವದ “ಆ” ಕೋಣೆಗೆ ಒಬ್ಬಳೇ ಹೋಗಿದ್ದಳಾ ನಟಿ ರಿಯಾ?

Pinterest LinkedIn Tumblr


ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿಸಿದ್ದು, ನಟ ಸುಶಾಂತ್ ಸಿಂಗ್ ಪ್ರೇಯಸಿಯನ್ನ ವಿಚಾರಣೆಗೊಳಪಡಿಸಲಾಗಿದೆ.

ಮರಣೋತ್ತರ ಪರೀಕ್ಷಾ ಕೊಠಡಿಗೆ, ಅಥವಾ ಮರಣೋತ್ತರ ಪರೀಕ್ಷೆ ಮಾಡಲಿರುವ ಶವ ಇರುವ ಕೊಠಡಿಗೆ ಕುಟುಂಬ ಸದಸ್ಯರಿಗೂ ಸಹ ಪ್ರವೇಶ ಇರುವುದಿಲ್ಲ. ಆದರೆ ಸುಶಾಂತ್ ಸಿಂಗ್ ಪ್ರೇಯಸಿ ರಿಯಾಗೆ ಪ್ರವೇಶ ನೀಡಲಾಗಿತ್ತು.

ಸುಶಾಂತ್ ಸಿಂಗ್ ಸಾವನ್ನಪ್ಪಿದಾಗ ಅವರ ಕಳೆಬರ ಇರಿಸಲಾಗಿದ್ದ ಮುಂಬೈನ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯೊಳಕ್ಕೆ ಸುಶಾಂತ್ ಸಿಂಗ್ ಪ್ರೇಯಸಿ, ಪ್ರಸ್ತುತ ಮೊದಲ ಆರೋಪಿ ರಿಯಾ ಚಕ್ರವರ್ತಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ.

ಸುಶಾಂತ್ ಶವವನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಇಡಲಾಗಿತ್ತು, ಅಲ್ಲಿಗೆ ರಿಯಾ ಅವರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಅಲ್ಲಿ ಸುಶಾಂತ್ ಸಹೋದರಿ ಇದ್ದರೂ ಪೊಲೀಸರು ರಿಯಾ ಅವರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದೇಕೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಶವವಿರುವ ಕೋಣೆಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಈ ಬಗ್ಗೆ ಮಾತನಾಡಿರುವ ಸುಶಾಂತ್ ಸಿಂಗ್ ತಂದೆ ಪರ ವಕೀಲರು, ಶವ ಇರಿಸಿರುವ ಕೋಣೆಯೊಳಕ್ಕೆ ಕುಟುಂಬ ಸದಸ್ಯರಿಗೂ ಪ್ರವೇಶ ನಿರ್ಬಂಧಿಸಲಾಗಿರುತ್ತದೆ. ಪೊಲೀಸರು ಇಲ್ಲದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಹಾಗಿದ್ದ ಮೇಲೆ ರಿಯಾಳನ್ನು ಸುಶಾಂತ್ ಶವವಿದ್ದ ಕೊಠಡಿಗೆ ಬಿಟ್ಟಿದ್ದು ಏಕೆ? ಎಂದು ವಕೀಲರು ಪ್ರಶ್ನಿಸಿದ್ದಾರೆ.

ಮುಂಬೈ ಪೊಲೀಸರು ಹಲವು ವಿಷಯಗಳಲ್ಲಿ ಎಡವಿದ್ದಾರೆ ಅಥವಾ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾರೆ. ಈ ಎಲ್ಲಾ ಕಾರ್ಯಗಳಿಗೆ ಸಾಕಷ್ಟು ಸ್ಪಷ್ಟೀಕರಣವನ್ನು ನ್ಯಾಯಾಲಯದಲ್ಲಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ವಕೀಲ ವಿಕಾಸ್ ಸಿಂಗ್.

Comments are closed.