ರಾಷ್ಟ್ರೀಯ

ಅಳಿಯನಾಗಬೇಕಿದ್ದವನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡ ಮಹಿಳೆ ಹೀಗಾ​ ಮಾಡೋದು?

Pinterest LinkedIn Tumblr


ನವದೆಹಲಿ: ಅಳಿಯನಾಗಬೇಕಿದ್ದ ವ್ಯಕ್ತಿಯೊಬ್ಬನಿಗೆ ಕರೆ ಮಾಡಿ ತನ್ನ ಮನೆಗೆ ಕರೆಯಿಸಿಕೊಂಡ ಮಹಿಳೆ ಆತ ಬಂದ ಕೂಡಲೇ ಮೊಬೈಲ್​ ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಮದನ್​ಪುರ್​​​ ಖಾದರ್​ ಏರಿಯಾದಲ್ಲಿರುವ ತನ್ನ ಮನೆಗೆ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಅಲೋಕ್​ ಕುಮಾರ್​ ಎಂಬಾತನನ್ನು ಮಹಿಳೆ ಕರೆಸಿಕೊಂಡಿದ್ದಳು. ಮೊಬೈಲ್​ ಕಿತ್ತುಕೊಂಡು ಓಡಿ ಹೋಗಿರುವ ಮಹಿಳೆಯ ವಿರುದ್ಧ ಅಲೋಕ್​ ಇದೀಗ ದೂರು ದಾಖಲಿಸಿದ್ದಾರೆ.

ದೂರಿನನ್ವಯ ಆರೋಪಿ ಉಷಾ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನನ್ನ ಮಗಳ ಜತೆ ದೂರುದಾರ ಅಲೋಕ್ ಕುಮಾರ್​ ಮದುವೆ ನಿಶ್ಚಯವಾಗಿತ್ತು. ಆದರೆ,​ ಕೆಲವು ವಿವಾದಗಳ ಬೆನ್ನಲ್ಲೇ ಸಂಬಂಧ ಮುರಿದುಬಿತ್ತು. ಆದರೂ ತನ್ನ ಮಗಳ ಫೋಟೋಗಳು ಅಲೋಕ್​ ಕುಮಾರ್​ ಮೊಬೈಲ್​ನಲ್ಲಿ ಇದ್ದವು. ಅವುಗಳನ್ನು ಡಿಲೀಟ್​ ಮಾಡುವುದಕ್ಕಾಗಿ ಮೊಬೈಲ್​ ಕಿತ್ತುಕೊಂಡೆ ಎಂದಿದ್ದಾರೆ.

ಉಷಾ ವಿಚಾರಣೆ ಬೆನ್ನಲ್ಲೇ ಅಲೋಕ್​ ಕುಮಾರ್​ ವಿಚಾರಣೆಯು ನಡೆಯಿತು. ಈ ವೇಳೆ ಉಷಾ ಅವರು ಹೇಳಿದ್ದು ಸರಿ ಎಂದು ಅಲೋಕ್​ ಕುಮಾರ್​ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.

Comments are closed.