ಮನೋರಂಜನೆ

ಶಾಶ್ವತವಾಗಿ ಪ್ರಸಾರ ನಿಲ್ಲಿಸಿದ ಕನ್ನಡ ಧಾರಾವಾಹಿ ‘ಸೀತಾ ವಲ್ಲಭ’

Pinterest LinkedIn Tumblr

ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳು ಆರಂಭವಾಗುವುದಕ್ಕಿಂತ ಧಾರಾವಾಹಿಗಳು ಹೆಚ್ಚು ಮುಕ್ತಾಯವಾಗುತ್ತಿದೆ. ಶಾಶ್ವತ ಪ್ರಸಾರ ನಿಲ್ಲಿಸಿದ ಧಾರಾವಾಹಿಗಳ ಜಾಗಕ್ಕೆ ಡಬ್ಬಿಂಗ್ ಧಾವಾವಾಹಿಗಳು ಲಗ್ಗೆ ಇಟ್ಟಿವೆ. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾ ವಲ್ಲಭ’ ಧಾರಾವಾಹಿ ಮುಕ್ತಾಯವಾಗುತ್ತಿದೆ.

500
ಎಪಿಸೋಡ್ಮಾಡಿ ಸಂಭ್ರಮಿಸಿದ್ದ ಧಾರಾವಾಹಿ

ಇತ್ತೀಚೆಗಷ್ಟೇ ಈ ಧಾರಾವಾಹಿ 500 ಎಪಿಸೋಡ್‌ಗಳ ಪ್ರಸಾರ ಮಾಡಿದ ಸಂಭ್ರಮ ಆಚರಿಸಿತ್ತು. ಈ ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್ ಧಾರಾವಾಹಿಯಲ್ಲಿ ನಟಿಸಿದ ಅನುಭವದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಸುಪ್ರೀತಾ ಸತ್ಯನಾರಾಯಣ್, ಜಗನ್ ಚಂದ್ರಶೇಖರ್, ಪ್ರಶಾಂತ್ ಮುಂತಾದವರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಸತ್ಯ ತಿಳಿದ ದೇವಕಿ
ಈಗ ಈ ಧಾರಾವಾಹಿಯಲ್ಲಿ ಮೈಥಿಲಿ ಪಾತ್ರದ ಬರ್ತಡೇಯನ್ನು ಆಚರಿಸಲಾಗಿತ್ತು. ವೈದೇಹಿ ಫೋನ್‌ನಲ್ಲಿ ಮಾತನಾಡುವುದನ್ನು ದೇವಕಿ ಕೇಳಿಸಿಕೊಳ್ಳುತ್ತಾಳೆ. ಇದನ್ನು ತಿಳಿದ ವೈದೇಹಿ ಸತ್ಯ ಮರೆಮಾಚಲು ಎಷ್ಟೇ ಪ್ರಯತ್ನಪಟ್ಟರೂ ಕೂಡ ದೇವಕಿ ಸತ್ಯ ಹೇಳುವಂತೆ ಒತ್ತಾಯಿಸುತ್ತಾಳೆ. ಆಗ ದೇವಕಿ ಮಗಳ ಚಿತ್ರವನ್ನು ಬಿಡಿಸುವ ವಿಚಾರವಾಗಿ ಲಂಚವನ್ನು ಪಡೆದ ಸತ್ಯವನ್ನು ವೈದೇಹಿ ಹೇಳುತ್ತಾಳೆ.

ಧಾರಾವಾಹಿ ಕಥೆಯೇನು?
‘ಸೀತಾ ವಲ್ಲಭ’ ಪಕ್ಕಾ ಮಹಿಳಾ ಪ್ರಧಾನ ಕಥೆ. ಮೈಥಿಲಿ ಪಾತ್ರದ ಸುತ್ತವೇ ಇದರ ಕಥೆ ಸಾಗುತ್ತದೆ. ಇಲ್ಲಿ ಅಚ್ಚು ಮತ್ತು ಗುಬ್ಬಿ ಬಾಲ್ಯದಲ್ಲಿ ಒಳ್ಳೆಯ ಸ್ನೇಹಿತರಾಗಿ ಆಮೇಲೆ ಬೇರೆ ಬೇರೆಯಾಗುತ್ತಾರೆ. ಅಪ್ಪ-ಅಮ್ಮ ಇಲ್ಲದ ಗುಬ್ಬಿ ಇನ್ನೊಬ್ಬರ ಮನೆ ಸೇರುತ್ತಾಳೆ. ಕಾಕತಾಳೀಯವಾಗಿ ಅಚ್ಚು (ಆರ್ಯ), ಗುಬ್ಬಿ (ಮೈಥಿಲಿ) ಮದುವೆಯಾಗುತ್ತದೆ. ಮದುವೆಯಾದ ಎಷ್ಟೋ ದಿನಗಳ ನಂತರ ನಾವಿಬ್ಬರೂ ಬಾಲ್ಯದ ಸ್ನೇಹಿತರು ಎಂದು ಅಚ್ಚು ಮತ್ತು ಗುಬ್ಬಿಗೆ ಅರಿವಾಗುತ್ತದೆ. ಆದರೆ ಈ ಜೋಡಿ ಒಂದಾಗಲು ಕೆಲ ದುಷ್ಟ ಪಾತ್ರಗಳು ಬಿಡೋದಿಲ್ಲ. ಇವೆಲ್ಲವನ್ನು ಮೈಥಿಲಿ ಹೇಗೆ ಬಗೆಹರಿಸುತ್ತಾಳೆ ಎಂಬುದೇ ‘ಸೀತಾ ವಲ್ಲಭ’ ಧಾರಾವಾಹಿ ಕಥೆ

 

Comments are closed.