ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ವಗೆ ಕರ್ನಾಟಕ, ಕನ್ನಡದ ನಂಟಿದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ, ಅವರ ಬಾಯಿಂದ ಕನ್ನಡ ಪದದ ಉಚ್ಚಾರಣೆ ಆಗುತ್ತದೆ ಎಂಬುದನ್ನು ನೋಡಿದವರು, ಕೇಳಿದವರು ಕಡಿಮೆ. ಇದೀಗ ಇದೇ ಅನುಷ್ಕಾ ಕನ್ನಡದ ಬಗ್ಗೆ ಮಾತನಾಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿಯೇ ಹೆಚ್ಚು ಸಮಯ ಕಳೆಯುವ ಅನುಷ್ಕಾ, ನಿಮ್ಮ ಏನೇ ಪ್ರಶ್ನೆಗಳಿದ್ದರೂ ಕೇಳಿ ಎಂದು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂನಲ್ಲಿ ಪ್ರಶ್ನೆ ಎಸೆದಿದ್ದರು. ಅದರಂತೆ ಸಾಕಷ್ಟು ಬಗೆಬಗೆಯ ಪ್ರಶ್ನೆಗಳು ಅನುಷ್ಕಾಗೆ ಎದುರಾಗಿದ್ದವು. ಅದರಲ್ಲಿ ‘ನಿಮಗೆ ಕನ್ನಡ ಬರುತ್ತದೆಯೇ?’ ಎಂದು ಕೇಳಿದ್ದಕ್ಕೆ, ವಿನಮ್ರವಾಗಿ, ‘ಸ್ವಲ್ಪ ಸ್ವಲ್ಪ …’ ಎಂದು ಉತ್ತರಿಸಿ ಕನ್ನಡಿಗರ ಹೃದಯ ಗೆದ್ದಿದ್ದಾರೆ ಅನುಷ್ಕಾ. ಇದರ ಜತೆಗೆ ತಾಯ್ತನದ ಬಗ್ಗೆ, ಪತಿ ವಿರಾಟ್ ಕೊಹ್ಲಿ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಅಂದಹಾಗೆ, ನಟಿ ಅನುಷ್ಕಾ ಮೂಲತಃ ಅಯೋಧ್ಯೆಯವರಾದರೂ, ಬೆಳೆದಿದ್ದು, ವಿದ್ಯಾಭ್ಯಾಸ ಮುಗಿಸಿದ್ದು ಬೆಂಗಳೂರಿನಲ್ಲಿ. ಹಾಗಾಗಿ ಸಹಜವಾಗಿ ಅವರಿಗೆ ಕನ್ನಡದ ನಂಟಿದೆ.

Comments are closed.