ಮನೋರಂಜನೆ

ಕಮಲ್​ ಹಾಸನ್​ ಸಿನೆಮಾಕ್ಕೆ ನಟಿಯರು ಈ ತ್ಯಾಗ?

Pinterest LinkedIn Tumblr


ಸಿನಿಮಾ ಇಂಡಸ್ಟ್ರಿ ಸ್ತಬ್ಧವಾಗಿದೆ. ಸಿನಿಮಾ ಶೂಟಿಂಗ್​ ಶುರುವಾದರೂ ಮೊದಲಿನ ರೀತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಜತೆಗೆ ಬಿಡುಗಡೆ ವಿಚಾರವಂತೂ ಸದ್ಯಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಶೂಟಿಂಗ್​ ಶುರುವಾದರೂ, ಮುನ್ನೆಚ್ಚರಿಕಾ ಕ್ರಮಗಳ ನಡುವೆಯೇ ಭಯದಲ್ಲಿಯೇ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಿರ್ಮಾಪಕರಿಗೆ ಸಹಜವಾಗಿ ಹೊರೆಯಾಗುತ್ತಿದೆ. ಆ ಹೊರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸಿನಿಮಾ ಕಲಾವಿದರು, ಸಂಭಾವನೆಯನ್ನು ಕಡಿತಗೊಳಿಸಿಕೊಳ್ಳುತ್ತಿದ್ದಾರೆ. ಇದೀಗ ನಾಯಕಿಯರೂ ಆ ಕೆಲಸಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಚಿರಂಜೀವಿ ನಟಿಸಲಿರುವ ಆಚಾರ್ಯ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಕಾಜಲ್​ ಅಗರ್​ವಾಲ್​, ಚಿತ್ರಕ್ಕಾಗಿ ಪಡೆಯಬೇಕಿದ್ದ ಸಂಭಾವನೆಯಲ್ಲಿ ಒಂದಷ್ಟು ಪ್ರಮಾಣವನ್ನು ಕಡಿತ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆ ಬಗ್ಗೆ ಸ್ವತಃ ನಟಿ ಕಾಜಲ್​ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಅದೇ ಪರಿಸ್ಥಿತಿ ಕಮಲ್​ ಹಾಸನ್​ ಚಿತ್ರಕ್ಕೂ ಒದಗಿ ಬಂದಿದೆ.

ಅಂದರೆ, ಶಂಕರ್​ ನಿರ್ದೇಶನದಲ್ಲಿ ಮೂಡಿಬರಲಿರುವ ಇಂಡಿಯನ್​ 2 ಚಿತ್ರದಲ್ಲಿ ಕಾಜಲ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ ನಾಯಕಿಯರಾಗಿ ನಟಿಸಲಿದ್ದಾರೆ. ಇದೀಗ ಇದೇ ಚಿತ್ರಕ್ಕಾಗಿ ಈ ಇಬ್ಬರು ನಟಿಯರು ಸಂಭಾವನೆಯನ್ನು ಕಡಿತ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಒಂದು ವೇಳೆ ಇದು ನಿಜವಾಗಿದ್ದೇ ಆದರೆ, ನಿರ್ಮಾಪಕರು ಮತ್ತಷ್ಟು ನಿರಾಳರಾಗಲಿದ್ದಾರೆ. ಜತೆಗೆ ಇನ್ನುಳಿದ ಸಿನಿಮಾ ಕಲಾವಿದರು ಇದನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

ಲೈಕಾ ಸಂಸ್ಥೆ ಇಂಡಿಯನ್​ 2 ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಕರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಚಿತ್ರೀಕರಣಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. 1996ರಲ್ಲಿ ತೆರಕಂಡಿದ್ದ ಇಂಡಿಯನ್​ ಚಿತ್ರದ ಸೀಕ್ವೆಲ್​ ಆಗಿ ಇಂಡಿಯನ್​ 2 ಸಿದ್ಧವಾಗುತ್ತಿದೆ.

Comments are closed.