ಮನೋರಂಜನೆ

ಬಾಲಿವುಡ್‌ ನಟ ಸುಶಾಂತ್‌ ಸಾವಿನ ಹಿಂದೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕೈವಾಡ !

Pinterest LinkedIn Tumblr

ಖ್ಯಾತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಜು. 14ರಂದು ತಮ್ಮ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಕೊನೆಯುಸಿರೆಳೆದರು. ಇತ್ತೀಚೆಗೆ ಅವರ ಮರಣೋತ್ತರ ಪರೀಕ್ಷೆ ವರದಿ ಬಂತು. ಅದರ ಪ್ರಕಾರವಾಗಿ ಇದು ಆತ್ಮಹತ್ಯೆ ಎಂಬುದು ಗೊತ್ತಾಗಿದೆ. ಹಾಗಿದ್ದರೂ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಮಾಜಿ ರಾ (RAW) ಅಧಿಕಾರಿಯೊಬ್ಬರು ಹಲವು ಅನುಮಾನದ ಪ್ರಶ್ನೆಗಳನ್ನು ಜನರ ಎದುರಿಗೆ ಇಟ್ಟಿದ್ದಾರೆ.

ಬಾಲಿವುಡ್‌ನಲ್ಲಿ ಇರುವ ನೆಪೋಟಿಸಂ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಅದೇ ಕಾರಣಕ್ಕಾಗಿ ಕರಣ್‌ ಜೋಹರ್‌, ಮಹೇಶ್‌ ಭಟ್‌ ಮುಂತಾದವರ ಮೇಲೆ ಅನುಮಾನದ ದೃಷ್ಟಿ ಬೀರಲಾಗುತ್ತಿದೆ. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಷ್ಟರೊಳಗೆ ಇನ್ನಷ್ಟು ಶಾಕಿಂಗ್‌ ಸಂಗತಿಗಳು ಚರ್ಚೆಗೆ ಬರುತ್ತಿವೆ.

ಸುಶಾಂತ್‌ ಅವರ ಹಿಂದೆ ದಾವೂದ್‌ ಇಬ್ರಾಹಿಂ ಗ್ಯಾಂಗ್‌ ಕೂಡ ಬಿದ್ದಿತ್ತು ಎಂದು ಮಾಜಿ ರಾ ಅಧಿಕಾರಿ ಎನ್‌.ಕೆ. ಸೂದ್‌ ಶಂಕೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣಗಳು ಏನಿರಬಹುದು ಎಂಬುದನ್ನೂ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಇದರಲ್ಲಿ ಪೊಲೀಸರ ಪಾತ್ರ ಏನು ಎಂಬ ಬಗ್ಗೆಯೂ ಸೂದ್‌ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ. ಮುಂದೆ ಓದಿ…

​ಯಾರಿಗೆಲ್ಲ ಗೊತ್ತಿತ್ತು ಈ ಸತ್ಯ?
ಸುಶಾಂತ್‌ ಸಿಂಗ್‌ ರಜಪೂತ್‌ ನಿಧನಕ್ಕೆ ಸಂಬಂಧಿಸಿದಂತೆ ಮಾಜಿ ರಾ ಅಧಿಕಾರಿ ಎನ್‌.ಕೆ. ಸೂದ್‌ ಅವರು ಯೂಟ್ಯೂಬ್‌ ವಿಡಿಯೋ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಪಕ್ಕಾ ಪ್ಲ್ಯಾನ್‌ ಮಾಡಿಕೊಂಡು ಸುಶಾಂತ್‌ ಅವರನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಹಲವರಿಗೆ ಮೊದಲೇ ವಿಷಯ ಗೊತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಸುಶಾಂತ್‌ ಅವರ ಮನೆಕೆಲಸದವರು, ಸ್ನೇಹಿತ ಸಂದೀಪ್‌ ಸಿಂಗ್‌, ಗೆಳತಿ ರಿಯಾ ಚಕ್ರವರ್ತಿಗೂ ಹತ್ಯೆಯ ಪ್ಲ್ಯಾನ್‌ ಬಗ್ಗೆ ಮೊದಲೇ ಗೊತ್ತಿತ್ತು. ಅವರನ್ನು ಬಚಾವ್‌ ಮಾಡುವ ಬದಲು ಇವರೆಲ್ಲ ಮೋಸ ಮಾಡಿದರು ಎಂದು ಎನ್‌.ಕೆ. ಸೂದ್‌ ಆರೋಪಿಸಿದ್ದಾರೆ.

ದಾವೂದ್‌ ಇಬ್ರಾಹಿಂ ಕೈವಾಡ?
ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಈಗ ಮುಂಬೈನಲ್ಲಿ ಇಲ್ಲದೆ ಇರಬಹುದು. ಆದರೆ ಮುಂಬೈ ಮೇಲೆ ಆತನಿಗೆ ನಿಯಂತ್ರಣ ಇಂದಿಗೂ ಇದೆ. ಹಣ ಬಲದಿಂದ ಆತ ಇನ್ನೂ ಸಕ್ರಿಯ ಆಗಿದ್ದಾನೆ. ದಾವೂದ್‌ ಇಬ್ರಾಹಿಂ ಸಹಚರರಿಂದ ಸುಶಾಂತ್‌ ಸಿಂಗ್‌ ರಜಪೂತ್‌ಗೆ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿತ್ತು. ಆಗ ಕಾರಣಕ್ಕಾಗಿಯೇ ಅವರು 50 ಬಾರಿ ಸಿಮ್‌ ಕಾರ್ಡ್‌ ಚೇಂಚ್‌ ಮಾಡಿದ್ದರು. ಅವರು ನಂಬರ್‌ ಬದಲಾಯಿಸಿದಾಗ ಆಪ್ತರಿಂದಲೇ ಮಾಹಿತಿ ಸೋರಿಕೆ ಆಗುತ್ತಿತ್ತು. ಜೀವದ ಭಯ ಇದ್ದ ಕಾರಣಕ್ಕಾಗಿಯೇ ಅವರು ಮನೆಯಿಂದ ದೂರ ಹೋಗಿ ಕಾರ್‌ನಲ್ಲಿಯೇ ಮಲಗುತ್ತಿದ್ದರು ಎಂದಿದ್ದಾರೆ ಎನ್‌.ಕೆ. ಸೂದ್‌.

​ಪ್ರಕರಣ ತಿರುಚಿದ್ರಾ ಪೊಲೀಸರು?
ಇದು ಹೈ ಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಇದರಲ್ಲಿ ಪೊಲೀಸರಿಗೆ ಲಾಭ ಇರುತ್ತದೆ. ಹಾಗಾಗಿ ಇಂಥ ಪ್ರಕರಣಗಳನ್ನು ತಿರುಚುವ ಸಾಧ್ಯತೆ ಇದೆ. ಸುಶಾಂತ್‌ ಕೊಲೆಯ ಹಿಂದೆಯೂ ಕೋಟ್ಯಂತರ ರೂ. ವ್ಯವಹಾರ ಇದೆ. ಸಾಯುವ ಮುನ್ನ ಸುಶಾಂತ್‌ ಯಾವುದೇ ಸೂಸೈಡ್‌ ನೋಟ್‌ ಬರೆದಿರಲಿಲ್ಲ. ಘಟನೆ ನಡೆಯುವ ಒಂದು ದಿನ ಮುಂಚೆ ಅವರ ಮನೆಯ ಸಿಸಿಟಿವಿ ಕ್ಯಾಮರಾಗಳು ಹಾಳಾಗಿದ್ದವು. ಮನೆಯ ಡೂಪ್ಲಿಕೇಟ್‌ ಕೀ ಕೂಡ ಮಿಸ್‌ ಆಗಿದೆ. ಇದನ್ನೆಲ್ಲ ನೋಡಿದರೆ ಪಕ್ಕಾ ಪ್ರೊಫೆಷನಲ್ ಆಗಿಯೇ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಕೊಲೆ ನಡೆದಿದೆ ಎಂದು ಗೊತ್ತಾಗುತ್ತದೆ ಎಂಬುದು ಸೂದ್‌ ಅಭಿಪ್ರಾಯ.

ಭೂಗತ ಲೋಕ ಮತ್ತು ಬಾಲಿವುಡ್‌!
‘ದುಡ್ಡು ಎಲ್ಲಿ ಇರುತ್ತದೋ ಅಲ್ಲಿ ಭೂಗತಲೋಕ ಇದ್ದೇ ಇರುತ್ತದೆ. ಬ್ಲಾಕ್‌ ಮನಿ ವೈಟ್ ಮಾಡಿಕೊಳ್ಳುವುದರಿಂದ ಹಿಡಿದು ಹಲವು ಉದ್ದೇಶಗಳಿಗಾಗಿ ಸಿನಿಮಾ ರಂಗದವರ ಜೊತೆ ಭೂಗತ ಪಾತಕಿಗಳು ಲಿಂಕ್‌ ಇಟ್ಟುಕೊಂಡಿರುತ್ತಾರೆ. ಪಾಕ್‌ನ ಭಯೋತ್ಪಾದಕರ ಜೊತೆಗೂ ಬಾಲಿವುಡ್‌ನವರಿಗೆ ಸಂಬಂಧ ಇದೆ. ಈ ಬಗ್ಗೆ ನಾನು ಮೊದಲೇ ಹೇಳಿದ್ದೇನೆ. ಸುಶಾಂತ್‌ ಮನೆ ಕೆಲಸದವನ ಮೇಲೆ ಹೆಚ್ಚು ಅನುಮಾನ ಮೂಡುತ್ತದೆ. ಆತನಿಗೆ ಎಲ್ಲದೂ ಗೊತ್ತಿತ್ತು. ಸುಶಾಂತ್‌ ಒಂದು ನಾಯಿ ಸಾಕಿದ್ದರು. ಕೊಲೆ ನಡೆಯುವಾಗ ಆ ನಾಯಿಯನ್ನು ಬೇರೆ ಕಡೆ ಸಾಗಿಸಲಾಗಿತ್ತು ಎಂದೂ ನನಗೆ ಅನಿಸುತ್ತಿದೆ’ ಎಂದಿದ್ದಾರೆ ಸೂದ್‌. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

Comments are closed.