ಮನೋರಂಜನೆ

ವಿದೇಶದಲ್ಲಿದ್ದರೂ ಮಗಳಿಗೆ ಕನ್ನಡ ಕಲಿಸುತ್ತಿರುವ ನಟಿ ಮಾನ್ಯಾ

Pinterest LinkedIn Tumblr


2005-06ರಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಮಾನ್ಯಾ ನಾಯ್ಡು. ವಿದೇಶದಲ್ಲಿ ಜನಿಸಿದ ಮಾನ್ಯಾ ಮಾತೃ ಭಾಷೆ ತೆಲುಗು. ಸಾಕಷ್ಟು ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ ಮೇಲೆ 2005ರಲ್ಲಿ ಅವರು ಕನ್ನಡಕ್ಕೆ ಎಂಟ್ರಿ ನೀಡಿದ್ದರು. ಆಗಲೇ ಅವರು ಕನ್ನಡ ಮಾತನಾಡುವುದನ್ನು ಕಲಿತಿದ್ದರು. ಪ್ರಸ್ತುತ ಅವರು ಅಮೆರಿಕದಲ್ಲಿ ಇದ್ದಾರೆ. ಆದರೂ, ಕನ್ನಡ ಮರೆತಿಲ್ಲ. ಜೊತೆಗೆ ಮಗಳು ಒಮಿಷ್ಕಾಗೂ ಅವರು ಕನ್ನಡ ಕಲಿಸುತ್ತಿದ್ದಾರೆ. ಆ ಕುರಿತ ಅವರ ಒಂದು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿದೆ.

ಏನಿದೆ ಆ ವಿಡಿಯೋದಲ್ಲಿ?
ನಟಿ ಮಾನ್ಯಾ ಕನ್ನಡಕ್ಕೆ ಕಾಲಿಟ್ಟಿದ್ದು ‘ವರ್ಷ’ ಚಿತ್ರದ ಮೂಲಕ. ಅದರಲ್ಲಿ ಹೀರೋ ಆಗಿ ವಿಷ್ಣುವರ್ಧನ್‌ ಅವರು ನಟಿಸಿದ್ದರು. ಅವರಿಗೆ ನಾಯಕಿಯಾಗಿ ಮಾನ್ಯಾ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಅವರು ಆ ಚಿತ್ರದ ‘ವಾಸಂತಿ ವಾಸಂತಿ..’ ಹಾಡನ್ನು ಹಾಡಿದ್ದಾರೆ. ಆ ಸಮಯದಲ್ಲಿ ಅವರ ಜೊತೆಗೆ ಮಗಳು ಕೂಡ ಇದ್ದಾಳೆ. ಹಾಡು ಹೇಳಿದ ಮೇಲೆ ‘ನನ್ನ ಹೆಸರು ಒಮಿಷ್ಕಾ. ಎಲ್ಲರಿಗೂ ನಮಸ್ಕಾರ’ ಎಂದು ಮಗಳಿಗೆ ಹೇಳಿಕೊಟ್ಟಿದ್ದಾರೆ. ಅದರ ಜೊತೆಗೆ ‘ವರ್ಷ’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.

ನಾನು ಅದೃಷ್ಟವಂತೆ ಎಂದ ಮಾನ್ಯಾ
‘ನಾನು ಗಾಯಕಿಯಲ್ಲ. ಆದರೆ, ನನ್ನ ಮಗಳಿಗೊಸ್ಕರ ಈ ಹಾಡನ್ನು ಪ್ರೀತಿಯಿಂದ ಹಾಡುತ್ತಿದ್ದೇನೆ. ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸಿದ್ದಕ್ಕಾಗಿ ಎಸ್‌. ನಾರಾಯಣ್‌ ಮತ್ತ ರಾಕ್‌ಲೈನ್ ವೆಂಕಟೇಶ್‌ ಅವರಿಗೆ ಧನ್ಯವಾದಗಳು. ಕನ್ನಡದಲ್ಲಿ ನನ್ನ ಮೊದಲ ಸಿನಿಮಾದಲ್ಲೇ ವಿಷ್ಣುವರ್ಧನ್ ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ಅದೃಷ್ಟವಂತೆ’ ಎಂದು ಹೇಳಿರುವ ಅವರು, ಆ ಚಿತ್ರದಲ್ಲಿ ನಟಿಸಿದ್ದ ರಮೇಶ್‌ ಅರವಿಂದ್‌, ಅನು ಪ್ರಭಾಕರ್, ಶ್ವೇತಾ ಚೆಂಗಪ್ಪ ಅವರನ್ನು ನೆನಪಿಸಿಕೊಂಡಿದ್ದಾರೆ.

Comments are closed.