ಮನೋರಂಜನೆ

ಹೃತಿಕ್ ರೋಷನ್ ಇರುವುದು ಬಾಡಿಗೆ ಮನೆಯಲ್ಲಿ, ನನ್ನದು ಸ್ವಂತ ಮನೆ; ಕಂಗನಾ ರಣಾವತ್

Pinterest LinkedIn Tumblr


ನಟಿ ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ನಡುವೆ ಕಿತ್ತಾಟ ನಡೆದಿರೋದು ಇಂದು ನಿನ್ನೆಯ ವಿಚಾರವಲ್ಲ. ಹೃತಿಕ್ ನನ್ನ ಹಳೆಯ ಬಾಯ್ಫ್ರೆಂಡ್ ಎಂದು ಕಂಗನಾ ಹೇಳಿಕೊಂಡಿದ್ದು, ಈ ವಿಚಾರವನ್ನು ಹೃತಿಕ್ ಅಲ್ಲಗಳೆದಿದ್ದು ಬಹುತೇಕರಿಗೆ ಗೊತ್ತಿದೆ. ಈಗ ಈ ವಿಚಾರದಲ್ಲಿ ಕಂಗನಾ ಮತ್ತೆ ಮಾತನಾಡಿದ್ದಾರೆ. ಹೃತಿಕ್ ಹೆಸರನ್ನು ಉಲ್ಲೇಖಿಸದೇ ಅವರ ವಿರುದ್ಧ ಹರಿ ಹಾಯ್ದಿದ್ದಾರೆ.

ಹೃತಿಕ್ ಜೊತೆ ಡೇಟಿಂಗ್ ನಡೆಸಿರುವುದಾಗಿ ಕಂಗನಾ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಈ ವಿಚಾರವಾಗಿ ಕಾನೂನಾತ್ಮಕ ಹೋರಾಟವನ್ನೂ ಮಾಡಿದ್ದರು ಕಂಗನಾ. ಸದ್ಯ, ಈ ವಿಚಾರ ತಣ್ಣಗಾಗಿದೆ. ಹೀಗಿರುವಾಗಲೇ ಹೃತಿಕ್ ವಿರುದ್ಧ ಕಂಗನಾ ಮತ್ತೆ ಕಮೆಂಟ್ ಮಾಡಿದ್ದಾರೆ.

ಹೃತಿಕ್ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಟಾಂಗ್ ನೀಡಿರುವ ಕಂಗನಾ “ನಾನು ಹಣದ ಹಿಂದೆ ಬಿದ್ದಿದ್ದೇನೆ. ನನಗೆ ಹಣದ ಹಪಹಪಿ ಇದೆ ಎಂದು ಅವರು ಹೇಳಿದ್ದರು. ಆದರೆ ಅವರು ಈಗ ಎಲ್ಲಿದ್ದಾರೆ? ಅಪ್ಪ ಕಟ್ಟಿಸಿದ ಮನೆಯಲ್ಲಿ ಬಾಡಿಗೆಗೆ ಇದ್ದಾರೆ,” ಎಂದು ಹೇಳುವ ಮೂಲಕ ಹೃತಿಕ್ ವಿರುದ್ಧ, ಹರಿಹಾಯ್ದಿದ್ದಾರೆ.

“ನಾನು ನನ್ನ ಕೆರಿಯರ್ ಆರಂಭಿಸಿದಾಗ ನನಗೆ ಯಾವುದೇ ರೀತಿಯ ಆಸೆಗಳು ಇರಲಿಲ್ಲ. ಆದರೆ, ಕೆಲ ವರ್ಷಗಳ ಹಿಂದೆ ಎಕ್ಸ್ ಜೊತೆಗಿನ ವಿಚಾರ ಭಾರೀ ಸುದ್ದಿಯಾಗಿತ್ತು. ಅಲ್ಲದೆ ನಾನು ಕಾನೂನಾತ್ಮಕವಾಗಿ ಹೋರಾಟ ಕೂಡ ಮಾಡಬೇಕಾಯಿತು. ನಾನು ಎಂದಿಗೂ ಹಣದ ಹಿಂದೆ ಬಿದ್ದವನಲ್ಲ,” ಎಂದಿದ್ದಾರೆ ಕಂಗನಾ. ಈ ಮೂಲಕ ಹೃತಿಕ್​ಗೆ ತಿರುಗೇಟು ನೀಡಿದ್ದಾರೆ.

“ನಾನು ನನ್ನದೇ ಸ್ವಂತ ಮನೆಯಲ್ಲಿ ಉಳಿದುಕೊಳ್ಳುತ್ತೇನೆ ಹಾಗೂ ನನ್ನ ಪ್ರಿಯಕರೆ ತಂದೆ ಕಟ್ಟಿಸಿದ ಮನೆಯಲ್ಲಿ ಬಾಡಿಗೆ ಇರುತ್ತಾನೆ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ,” ಎಂದು ಕಂಗನಾ ಹೇಳಿದ್ದಾರೆ. ಈ ಮೂಲಕ ಹೃತಿಕ್ ವಿರುದ್ಧ ಹರಿಹಾಯ್ದಿದ್ದಾರೆ.

Comments are closed.