ರಾಷ್ಟ್ರೀಯ

ಹೆಂಡತಿ ಆತ್ಮಹತ್ಯೆಗೆ ಶರಣು: ಪತ್ನಿಯ ಚಿತೆಗೆ ಜಿಗಿದ ಪತಿ

Pinterest LinkedIn Tumblr


ಸ್ವಾತಂತ್ರ್ಯ ಪೂರ್ವದಲ್ಲಿ ಸ’ತಿಹೋಗುವ ಪದ್ಧತಿ ಇತ್ತು. ಪತಿಯ ನಿ’ಧನದ ನಂತರ ಪತ್ನಿ ಆತನ ಚಿ’ತೆಯ ಮೇಲೆ ಜಿಗಿದು ತನ್ನ ಪ್ರಾ’ಣವನ್ನು ಕೊಡುತ್ತಿದ್ದಳು.

ಮಹಾರಾಷ್ಟ್ರದ ಚಂದ್ರಪೂರದಲ್ಲಿ ಇದರ ತದ್ವಿರುದ್ಧ ಘಟನೆ ನಡೆದಿದೆ. ಪತ್ನಿಯ ಉ’ರಿಯುತ್ತಿರುವ ಚಿ’ತೆಯ ಮೇಲೆ ಆಕೆಯ ಪತಿರಾಯ ಜಿಗಿದು ತನ್ನ ಜೀವನದ ತ್ಯಾಗ ಮಾಡಿದ್ದಾನೆ. ಮದುವೆಯ ಬರೀ ಮೂರೇ ತಿಂಗಳಲ್ಲಿ ಈ ನವಜೋಡಿಯ ಕರುಣ ಕಥೆಯಾಗಿದೆ. ಕಿಶೋರ್ ಮತ್ತು ರುಚಿತಾ ಮೃ’ತ ದಾಂಪತ್ಯಗಳ ಹೆಸರಿದೆ. ಘಟನೆ ಚಂದ್ರಪೂರ ಜಿಲ್ಲೆಯ ಗೊಂಡಪಿಪರಿ ತಾಲೂಕಿನಲ್ಲಿ ನಡೆದಿದೆ.

ಸುದ್ದಿ ಮೂಲಗಳ ಪ್ರಕಾರ ಮದುವೆಯಾದ 19 ವರ್ಷದ ನವವಿವಾಹಿತೆ ಎರಡು ದಿನಗಳ ಮುಂಚೆ ತನ್ನ ತವರೂರಿನಲ್ಲಿ ಬಹಿರ್ದೆಶೆಗೆ ಹೋಗುತ್ತೇನೆಂದು ಹೇಳಿ ಬಾವಿಯಲ್ಲಿ ಹಾರಿ ತನ್ನ ಪ್ರಾ’ಣ ಬಿಟ್ಟಳು. ಅವಳು ಆಗ ಎರಡು ತಿಂಗಳ ಗರ್ಭವತಿಯಾಗಿದ್ದಳು. ಈ ಘಟನೆಯ ನಂತರ ಆಕೆಯ ಅಂ’ತ್ಯಸಂಸ್ಕಾರದ ಸಮಯದಲ್ಲಿ ಉರಿಯುತ್ತಿರುವ ಬೆಂ’ಕಿಯಲ್ಲಿ ತಕ್ಷಣ ಆಕೆಯ ಗಂಡ ಜಿಗಿದನು. ಒಮ್ಮೆಲೇ ಆದ ಈ ಘಟನೆಯಿಂದ ಅಲ್ಲಿದ್ದ ಜನರು ಶತಪ್ರಯತ್ನ ಮಾಡಿ ಆತನನ್ನು ಬೆಂ’ಕಿಯಿಂದ ಹೊರಗೆ ತೆಗೆಯುವಷ್ಟರಲ್ಲಿ ತುಂಬಾ ಸು’ಟ್ಟುಕೊಂಡಿದ್ದನು. ಆತ ಅಷ್ಟಕ್ಕೇ ನಿಲ್ಲದೆ ಚಿ’ತೆಯ ಮೇಲಿಂದ ತೆಗೆದನಂತರ ಅಲ್ಲಿ ಉಪಸ್ಥಿತರಿದ್ದವರಿಗೆ ತಪ್ಪಿಸಿ ಸಮೀಪದಲ್ಲಿಯೇ ಇದ್ದ ಬಾವಿಯಲ್ಲಿ ಜಿಗಿದು ತನ್ನ ಜೀವನಕ್ಕೆ ಕೊ’ನೆ ಹಾಡಿದನು. ಕಿಶೋರ್ ನ ಮದುವೆ ರುಚಿತಾ ಜೊತೆಗೆ ಮಾರ್ಚ್ 19 ರಂದು ಮದುವೆಯಾಗಿತ್ತು. ಆಕೆ ತನ್ನ ಗಂಡನೊಂದಿಗೆ ಚಂದ್ರಪೂರದಲ್ಲಿ ವಾಸ್ತವ್ಯಕ್ಕೆ ಇದ್ದಳು.

ನಾಲ್ಕು ದಿನಗಳ ಮುಂಚೆ ತನ್ನ ತವರೂರಾದ ತಲೋಧಿಗೆ ಬಂದಿದ್ದಳು. ರವಿವಾರ ಸಾಯಂಕಾಲ ಹೊತ್ತಿಗೆ ಶೌಚದ ಕಾರಣ ಹೇಳಿ ಮನೆಯಿಂದ ಹೊರಗೆ ಬಿದ್ದವಳು ಮತ್ತೆ ಮನೆಗೆ ವಾಪಸ್ ಬರಲೇ ಇಲ್ಲ. ಎಷ್ಟು ಹೊತ್ತಾದರೂ ಮನೆಗೆ ವಾಪಸ್ ಬಾರದ್ದರಿಂದ ಮನೆಯವರೆಲ್ಲ ಹುಡುಕಿದಾಗ ತಿಳಿದು ಬಂತು ಬಾವಿಯಲ್ಲಿ ಹಾರಿ ತೀ’ರಿಕೊಂಡಿದ್ದು. ಆಕೆ ಎರಡು ತಿಂಗಳ ಗರ್ಭವತಿ ಇದ್ದಳು. ಅವಳ ಪಾರ್ಥಿವಕ್ಕೆ ಬೆಂ’ಕಿ ಹಚ್ಚಿದಾಗ ಅದೇ ಚಿ’ತೆಯಲ್ಲಿ ಗಂಡ ಕಿಶೋರನು ಜಿಗಿದು ಬಿಟ್ಟನು.

ರುಚಿತಾ ಆತ್ಮಹ’ತ್ಯೆ ಯಾಕೆ ಮಾಡಿಕೊಂಡಳು ಈ ತನಿಖೆ ನಡೆಯುತ್ತಿರುವಾಗಲೇ ಪತಿಯ ನಿರ್ಗಮನವು ಬೇರೆ ಚರ್ಚೆಗೆ ಎಡೆಮಾಡಿಕೊಡುತ್ತಿದೆ. ನವದಾಂಪತ್ಯಗಳ ಈ ರೀತಿಯ ಅಕಾಲಿಕ ಸಾ’ವಿನಿಂದ ಊರಜನರು ಕಳವಳ ವ್ಯಕ್ತ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

Comments are closed.