ಮನೋರಂಜನೆ

ಪ್ರಥಮ ಬಾರಿಗೆ ಹಾರರ್‌ ಸಿನಿಮಾ ಸಹವಾಸ ಮಾಡುತ್ತಿರುವ ನಟಿ ಮೇಘನಾ ಗಾಂವ್ಕರ್‌!

Pinterest LinkedIn Tumblr


‘ಕರ್ವ 3’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೇಘನಾ ಗಾಂವ್ಕರ್‌ ತಾವು ಇದೇ ಮೊದಲ ಬಾರಿಗೆ ಹಾರರ್‌ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಮತ್ತು ಇದರಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ‘ಕರ್ವ 2’ ನಿರ್ಮಾಣಕ್ಕೆ ಮೊದಲೇ ಬರುತ್ತಿರುವ ‘ಕರ್ವ 3’ ಚಿತ್ರದಲ್ಲಿ ತಿಲಕ್‌ ಮತ್ತು ಮೇಘನಾ ಗಾಂವ್ಕರ್‌ ಜೋಡಿಯಾಗಿ ನಟಿಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೇಘನಾ ಗಾಂವ್ಕರ್‌ ‘ಈ ಚಿತ್ರದ ಸ್ಕ್ರಿಪ್ಟ್‌ ತುಂಬಾ ಚೆನ್ನಾಗಿದೆ. ಕಾಮಿಡಿ, ರೊಮ್ಯಾಂಟಿಕ್‌, ಟ್ರಾಜಿಡಿ ಪಾತ್ರಗಳಲ್ಲಿ ನಾನು ಈಗಾಗಲೇ ನಟಿಸಿದ್ದೇನೆ. ಆದರೆ, ಹಾರರ್‌ ಸಿನಿಮಾದಲ್ಲಿ ನಟಿಸಿರಲಿಲ್ಲ. ಕೃಷ್ಣ ಚೈತನ್ಯ ನಿರ್ಮಾಣದ ‘ದಿಯಾ’ ಚಿತ್ರ ನನಗೆ ತುಂಬಾ ಇಷ್ಟ ಆಗಿತ್ತು. ಅವರ ಆಫೀಸ್‌ಗೆ ಹೋಗಿದ್ದಾಗ ‘ಕರ್ವ 3′ ಸ್ಕ್ರಿಪ್ಟ್‌ ಬಗ್ಗೆ ಚರ್ಚೆ ನಡೆಯುತ್ತಿತ್ತು. ಸ್ವಲ್ಪ ಕಥೆ ಕೇಳಿದ ನಾನೂ ಚೆನ್ನಾಗಿದೆ ಎಂದು ಹೇಳಿ ಬಂದುಬಿಟ್ಟೆ. ನಂತರ ನಿರ್ದೇಶಕ ವಿಶಾಲ್‌ ಮತ್ತು ನಿರ್ಮಾಪಕ ಕೃಷ್ಣ ಚೈತನ್ಯ ಇಬ್ಬರೂ ಚರ್ಚಿಸಿ ನನಗೆ ಫೋನ್‌ ಮಾಡಿ ನೀವೇ ಈ ಪಾತ್ರದಲ್ಲಿ ನಟಿಸಿ ಎಂದರು. ನನಗೂ ತುಂಬಾ ಖುಷಿಯಾಯ್ತು’ ಎಂದಿದ್ದಾರೆ.

ಕರ್ವ 3 ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದರೂ ‘ಕರ್ವ 2’ ಸಿನಿಮಾದ ಕಥೆ ತಮಗೆ ಗೊತ್ತಿಲ್ಲ ಎಂದಿರುವ ಮೇಘನಾ ‘ಕರ್ವ 2 ಬಗ್ಗೆ ನನಗೆ ಏನೂ ಗೊತ್ತಿಲ್ಲ. ‘ಕರ್ವ 3’ ಸಿನಿಮಾ ನೋಡುವಾಗ ‘ಕರ್ವ 2’ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಾಗಲಿದೆ ಅನ್ನೋದನ್ನು ಮಾತ್ರ ನನಗೆ ಹೇಳಿದ್ದಾರೆ. ಆ ಕಥೆಯೂ ರೆಡಿ ಇದೆ. ಅದರಲ್ಲಿ ನನ್ನ ಪಾತ್ರ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ‘ಕರ್ವ’ ಚಿತ್ರವೇ ನನಗೆ ಬಹಳ ಇಷ್ಟ ಆಗಿತ್ತು. ತಾಂತ್ರಿಕ ಗುಣಮಟ್ಟ, ರವಿ ಬಸ್ರೂರು ಸಂಗೀತ ನನಗೆ ಮೆಚ್ಚುಗೆಯಾಗಿತ್ತು. ಈಗ ‘ಕರ್ವ 3′ ಚಿತ್ರದಲ್ಲಿ ನಾನೇ ನಟಿಸುತ್ತಿರುವುದು ಇನ್ನೂ ಖುಷಿ ಕೊಟ್ಟಿದೆ’ ಎಂದಿದ್ದಾರೆ.

ಈ ಚಿತ್ರದ ಪೂರ್ವ ತಯಾರಿ ನಡೆದಿದ್ದು, ಇನ್ನೊಂದು ತಿಂಗಳ ನಂತರ ಶೂಟಿಂಗ್‌ ಪ್ರಾರಂಭವಾಗುವ ಸಾಧ್ಯತೆ ಇದೆ. ‘ಕರ್ವ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕೆಲ ಪಾತ್ರಗಳು ಈ ಚಿತ್ರದಲ್ಲೂ ಬರಲಿವೆ. ‘ಜಗತ್ತಿನಲ್ಲಿ ಹಾರರ್‌ ಜಾನರ್‌ನ ಎಷ್ಟೋ ಸಿನಿಮಾಗಳು ಬಂದು ಹೋಗಿವೆ. ಆದರೆ, ‘ಕರ್ವ 3′ ಚಿತ್ರದ ಕಥೆ ಇವೆಲ್ಲಕ್ಕಿಂತ ಭಿನ್ನವಾಗಿದೆ. ಇಲ್ಲಿಯವರೆಗೆ ಈ ಎಲಿಮೆಂಟ್‌ ಅನ್ನು ಯಾರೂ ಕಂಡುಕೊಂಡಿಲ್ಲ’ ಎಂದಿದ್ದಾರೆ ಮೇಘನಾ.

ತಿಲಕ್‌ ಜತೆ ಇದೇ ಮೊದಲ ಬಾರಿಗೆ ಮೇಘನಾ ಗಾಂವ್ಕರ್‌ ನಟಿಸಲಿದ್ದಾರೆ. ‘ಈ ಹಿಂದೆ ಹಲವು ಚಿತ್ರಗಳಲ್ಲಿ ತಿಲಕ್‌ ಜತೆ ನಟಿಸುವ ಅವಕಾಶ ಸಿಕ್ಕಿದ್ದರೂ ನನ್ನ ಪಾತ್ರ ಅಥವಾ ಸ್ಟೋರಿ ಇಷ್ಟವಾಗದೆ ಒಪ್ಪಿರಲಿಲ್ಲ. ಆದರೆ ಈ ಚಿತ್ರ ಎಲ್ಲಾ ರೀತಿಯಿಂದಲೂ ಚೆನ್ನಾಗಿದೆ’ ಎಂದಿದ್ದಾರೆ ಅವರು. ಮೇಘನಾ ಅವರು ‘ಗಾನ್‌ ಕೇಸ್‌’ ಎಂಬ ಚಿತ್ರವನ್ನೂ ಈ ಹಿಂದೆ ಒಪ್ಪಿಕೊಂಡಿದ್ದು, ಅದರ ಶೂಟಿಂಗ್‌ ಇನ್ನಷ್ಟೇ ಶುರುವಾಗಬೇಕಿದೆ. ಇವರ ನಟನೆಯ ‘ಶುಭಮಂಗಳ’ ಚಿತ್ರ ರಿಲೀಸ್‌ಗೆ ಕಾದಿದೆ.

Comments are closed.