ವಾಟ್ಸ್ಆ್ಯಪ್ನಲ್ಲಿ ಇದ್ದಕ್ಕಿಂದ್ದಂತೆಯೇ ಪ್ರೈವೆಸಿ ಸೆಟ್ಟಿಂಗ್ ಮತ್ತು ಸ್ಟೇಟಸ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಹುತೇಕರು ಗಲಿಬಿಲಿಗೊಂಡಿದ್ದಾರೆ. ಶುಕ್ರವಾರ ರಾತ್ರಿ (ಜೂ.06) ವಾಟ್ಸ್ಆ್ಯಪ್ ಬಳಕೆದಾರರ ಸೆಟ್ಟಿಂಗ್ಸ್ ಮತ್ತು ಲಾಸ್ಟ್ ಸೀನ್ ಕಾಣಿಸಿಕೊಳ್ಳದೆ ಭಯಗೊಂಡಿದ್ದಾರೆ.
ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಫೋಟೋ ಸಮೇತ ಪ್ರೈಮೆಸಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದಿದ್ದಾರೆ.
ಇದ್ದಕ್ಕಿದ್ದಂತೆಯೇ ವಾಟ್ಸ್ಆ್ಯಪ್ನಲ್ಲಿ ಪ್ರೈವೆಸಿ ಮತ್ತು ಸ್ಟೇಟಸ್ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವರು ತಕ್ಷಣವೇ ಸೆಟ್ಟಿಂಗ್ಸ್ ಬದಲಾಯಿಸಲು ಮುಂದಾಗಿದ್ದಾರೆ. ಆದರೆ ಅದು ಅವರಿಗೆ ಸಾಧ್ಯವಾಗಿಲ್ಲ. ಕಸ್ಟಮ್ ಸೆಟ್ಟಿಂಗ್ಸ್ ಕೂಡ ಸ್ವಯಂ ಚಾಲಿತವಾಗಿ ಬದಲಾಗಿದೆ.
ಜಾಗತಿಕವಾಗಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಐಫೋನ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರು ಒಂದು ಕ್ಷಣ ವಾಟ್ಸ್ಆ್ಯಪ್ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಇನ್ನು ಕೆಲವರು ಸ್ನೇಹಿತರ ಬಳಿ ವಾಟ್ಸ್ಆ್ಯಪ್ ಸಮಸ್ಯೆ ಇದೆಯಾ? ಎಂದು ಪರಿಶೀಲಿಸಿಕೊಂಡಿದ್ದಾರೆ. ಇನ್ನು ಕೆಲವರು ಅನ್ಇನ್ಸ್ಟಾಲ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಲಾಗದೆ ಪರದಾಡಿದ್ದಾರೆ.
Comments are closed.