ಅಂತರಾಷ್ಟ್ರೀಯ

ಬ್ರೇಕಪ್ ಫೀಲಿಂಗ್​ಗೆ ಕುಡಿದು ಹಾರಾಟ ನಡೆಸುತ್ತಿದ್ದ ವಿಮಾನದ ಕಿಟಕಿಯ ಗಾಜನ್ನೇ ಒಡೆದ ಯುವತಿ!

Pinterest LinkedIn Tumblr


ಬ್ರೇಕಪ್​ ಆದ ನಂತರ ಕುಡಿದು ನಡೆಸುವ ಅವಾಂತರ ಒಂದೆರಡಲ್ಲ. ಅದೇ ರೀತಿ ಪ್ರೀತಿ ಮಣ್ಣಾಗಿದ್ದಕ್ಕೆ ಮಹಿಳೆಯೊಬ್ಬಳು ಕಂಠ ಪೂರ್ತಿ ಕುಡಿದಿದ್ದಾಳೆ. ಅಷ್ಟೇ ಅಲ್ಲ, ವಿಮಾನದ ಗಾಜನ್ನೇ ಒಡೆದು ಹಾಕಿದ್ದಾಳೆ. ನಂತರ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಿದೆ!

ಹೌದು, ಹೀಗೊಂದು ಘಟನೆ ಚೀನಾದಲ್ಲಿ ನಡೆದಿದೆ. ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಚೀನಾದಲ್ಲಿ ಮೂರು ತಿಂಗಳಿಗೂ ಅಧಿಕ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಯಾವಾಗ ಸೋಂಕು ನಿಯಂತ್ರಣಕ್ಕೆ ಬಂದಿತೋ ದೇಶೀಯ ವಿಮಾನ ಹಾರಾಟ ಆರಂಭಿಸಲಾಗಿತ್ತು. ಈ ವೇಳೆ ಮಹಿಳೆಯೋರ್ವಳು ವಿಮಾನ ಏರಿದ್ದಳು. ಅಲ್ಲಿ ಕಂಠಪೂರ್ತಿ ಕುಡಿದಿದ್ದಳು.

ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಈ ಯುವತಿಯ ಗೋಳಾಟ ಹೆಚ್ಚಾಗಿದೆ. ಒಂದೇ ಸಮನೆ ಅಳಲು ಪ್ರಾರಂಭಿಸಿದ್ದ ಆಕೆ, ಕಿಟಕಿ ಗಾಜಿಗೆ ಗುದ್ದಲು ಆರಂಭಿಸಿದ್ದಳು. ಸಹ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಎಷ್ಟೇ ಹೇಳಿದರೂ ಆಕೆ ತನ್ನ ಕಾರ್ಯವನ್ನು ಮುಂದುವರಿಸಿಯೇ ಇದ್ದಳು. ಪರಿಣಾಮ, ವಿಮಾನದ ಕಿಟಕಿ ಗಾಜಿನ ಒಂದು ಲೇಯರ್​ ಒಡೆದು ಹೋಗಿದೆ. ಹೀಗಾಗಿ ವಿಮಾನವನ್ನು ತಕ್ಷಣಕ್ಕೆ ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿದೆ.

ಯುವತಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ತಿಳಿದು ಬಂದ ವಿಚಾರ ಎಂದರೆ, ಆಕೆಯ ಬಾಯ್​ಫ್ರೆಂಡ್​ ಆಕೆಯನ್ನು ಡಂಪ್​ ಮಾಡಿದ್ದನಂತೆ. ಇದೇ ಬೇಸರಕ್ಕೆ ಆಕೆ ಯರ್ರಾಬಿರ್ರಿ ಕುಡಿದು ಬಿಟ್ಟಿದ್ದಳು. ಸದ್ಯ, ಪೊಲೀಸರು ಯುವತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

Comments are closed.