ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾದಲ್ಲಿ ಯುವರತ್ನ ಸಿನಿಮಾ ಕೂಡ ಒಂದು. ಈಗಾಗಲೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿದೆ. ಹೀಗಿರುವಾಗ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಮಯ ನೋಡಿ ಸಿನಿಮಾ ಪೋಸ್ಟರ್, ಟೀಸರ್ ಬಿಡುಗಡೆ ಮಾಡುತ್ತಾ ಬಂದಿದ್ದಾರೆ. ಕೊರೋನಾ ಮುಗಿದು ಸಹಜ ಸ್ಥಿತಿಗೆ ಬಂದ ನಂತರ ಸಿನಿಮಾದ ಹಾಡು, ಟ್ರೇಲರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೀಗ ಅದಕ್ಕೂ ಮೊದಲೇ ಸಿನಿಮಾದ ಕೆಲ ಫೋಟೋಗಳನ್ನು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ಕೆಲ ಫೋಟೋಗಳು ಲೀಕ್ ಆಗಿವೆ. ಯಾರೋ ಕಿಡಿಗೇಡಿಗಳು ಸಿನಿಮಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರ ತಿಳಿದಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಫೋಟೋಗಳನ್ನು ಶೇರ್ ಮಾಡಬೇಡಿ ಎಂದು ಅಭಿಮಾನಿಗಳೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾದಲ್ಲಿ ಯುವರತ್ನ ಸಿನಿಮಾ ಕೂಡ ಒಂದು. ಈಗಾಗಲೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿದೆ. ಹೀಗಿರುವಾಗ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಮಯ ನೋಡಿ ಸಿನಿಮಾ ಪೋಸ್ಟರ್, ಟೀಸರ್ ಬಿಡುಗಡೆ ಮಾಡುತ್ತಾ ಬಂದಿದ್ದಾರೆ. ಕೊರೋನಾ ಮುಗಿದು ಸಹಜ ಸ್ಥಿತಿಗೆ ಬಂದ ನಂತರ ಸಿನಿಮಾದ ಹಾಡು, ಟ್ರೇಲರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೀಗ ಅದಕ್ಕೂ ಮೊದಲೇ ಸಿನಿಮಾದ ಕೆಲ ಫೋಟೋಗಳನ್ನು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ.
ಈ ವಿಚಾರ ತಿಳಿದುಬಂದಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಾಕಿ ಮನವಿ ಮಾಡಿದ್ದಾರೆ. ‘ಎಲ್ಲಾ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ನನ್ನ ವಿನಂತಿ ಯುವರತ್ನ ಚಿತ್ರದ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ ಪ್ರತಿ ಅಭಿಮಾನಿಗೂ ನನ್ನ ಕೋರಿಕೆ ದಯವಿಟ್ಟು ನೀವು ಸ್ಟಿಲ್ಸ್ ಗಳನ್ನು ಶೇರ್ ಮಾಡುವುದು ಬಿಡಿ, ಡಿಲೀಟ್ ಮಾಡಿ!ಅದು ನೀವು ಅಪ್ಪುಸರ್ ಹಾಗು ಯುವರತ್ನ ಸಿನಿಮಾಗು ಸೂಚಿಸುವ ಗೌರವ ಎಂದು ಭಾವಿಸಿದ್ದೇನೆ‘ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ನಲ್ಲಿ ನಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ #IdeleteyuvarathnaaPic, #SupportYuvarathnaa ಎಂದು ವಿನಂತಿಸಿದ್ದಾರೆ.
Comments are closed.