ಮನೋರಂಜನೆ

ಅಮ್ಮನಾಗುವ ಖುಷಿಯಲ್ಲಿ ಜನಪ್ರಿಯ ಧಾರಾವಾಹಿ ನಟಿ!

Pinterest LinkedIn Tumblr


ಲಾಕ್ ಡೌನ್ ಟೈಮ್‌ನಲ್ಲಿ ಹಲವರು ಮಗುವಿಗೆ ಜನ್ಮ ನೀಡಿದ್ದಾರೆ, ಇನ್ನೂ ಕೆಲವರು ಗರ್ಭಿಣಿಯಾಗಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಕಿರುತೆರೆ ನಟ-ನಟಿಯರಲ್ಲಿ ಸಾಕಷ್ಟು ಜನ ಲಾಕ್‌ ಡೌನ್‌ ನಡುವೆ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ‘ಕುಂಕುಮ ಭಾಗ್ಯ’ ಧಾರಾವಾಹಿ ನಟಿ ಶಿಖಾ ಸಿಂಗ್ ಕೂಡ ಈಗ ತಾಯಿಯಾಗುತ್ತಿದ್ದಾರೆ.

ಹಲವು ಸಮಯಗಳ ಕಾಲ ಪೈಲೆಟ್ ಬಾಯ್‌ಫ್ರೆಂಡ್ ಕರಣ್ ಜೊತೆಗೆ ಡೇಟಿಂಗ್ ಮಾಡಿದ್ದ ಶಿಖಾ ಕೊನೆಗೂ ಇವರ ಜೊತೆಗೇನೆ ಹಸೆಮಣೆ ಏರಿದ್ದರು. ಇವರ ವೈವಾಹಿಕ ಜಿವನಕ್ಕೆ 4 ವರ್ಷಗಳ ಸಂಭ್ರಮ. ಅದರ ಜೊತೆಗೆ ಶಿಖಾ ಕೂಡ ಹಂಚಿಕೊಂಡಿದ್ದರು.

‘ಕುಂಕುಮ ಭಾಗ್ಯ’ದ ವಿಲನ್ ಈಕೆ
‘ಕುಂಕುಮ ಭಾಗ್ಯ’ ಧಾರಾವಾಹಿ 2014ರಿಂದ ಪ್ರಸಾರವಾಗುತ್ತಿದೆ. ಲೇಖಕ ಜಾನ್ ಆಸ್ಟೆನ್ ಅವರ ‘ಸೆನ್ಸ್ & ಸೆನ್ಸಿಬಿಲಿಟಿ’ ಕಾದಂಬರಿ ಆಧಾರಿತ ಧಾರಾವಾಹಿಯಿದು. ಅಭಿಷೇಕ್ ಮೆಹ್ರಾ ಮತ್ತು ಪ್ರಗ್ಯಾ ಕುರಿತಂತೆ ಈ ಧಾರಾವಾಹಿ ಸಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲೊಂದು ನವಿರಾದ ಪ್ರೇಮಕಥೆಯಿದೆ. ‘ರಾಕ್‌ ಸ್ಟಾರ್ ಅಭಿ ಮಧ್ಯಮ ವರ್ಗದ ಹುಡುಗಿಯನ್ನು (ಪ್ರಗ್ಯಾ) ದ್ವೇಷಕ್ಕಾಗಿ ಪ್ರೀತಿಸಿ ಮದುವೆಯಾಗುತ್ತಾನೆ, ಮಾನಸಿಕವಾಗಿ ಹಿಂಸೆ ಕೊಡುತ್ತಾನೆ, ಆಮೇಲೆ ಅವಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾನೆ. ಹಲವು ಘಟನೆಗಳಿಂದ ಈ ಜೋಡಿ ದೂರವಾಗುತ್ತವೆ. ಅವರ ಅವಳಿ-ಜವಳಿ ಮಕ್ಕಳಿಂದ ಮುಂದಿನ ದಿನಗಳಲ್ಲಿ ಒಂದಾಗುತ್ತಾರೆಯೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆ. ಈ ಧಾರಾವಾಹಿಗೆ ಅತಿ ಹೆಚ್ಚಿನ ಪ್ರೇಕ್ಷಕರಿದ್ದು, ಹಿಂದಿ ಭಾಷೆಯ ಸೀರಿಯಲ್ ಇದಾಗಿದೆ.

‘ಮಹಾಭಾರತ’ದ ಶಿಖಂಡಿ ಪಾತ್ರಕ್ಕೆ ಜೀವ ತುಂಬಿದ್ದ ಶಿಖಾ
‘ಕುಂಕುಮ ಭಾಗ್ಯ’ ಧಾರಾವಾಹಿಯಲ್ಲಿ ಆಲಿಯಾ ಪಾತ್ರದಲ್ಲಿ ನಟಿ ಶಿಖಾ ಸಿಂಗ್ ನಟಿಸುತ್ತಿದ್ದಾರೆ. ಇದು ಪಕ್ಕಾ ನೆಗೆಟಿವ್ ಪಾತ್ರ. ಅತ್ತಿಗೆ ಪ್ರಗ್ಯಾಳನ್ನು ಅಣ್ಣ ಅಭಿ ಜೊತೆಗೆ ಇರಲು ಆಕೆ ಬಿಡೋದಿಲ್ಲ. ಒತ್ತಾಯಪೂರ್ವಕವಾಗಿ ಇನ್ನೊಬ್ಬ ಹುಡುಗಿ ತನು ಗಂಡನನ್ನು ಆಲಿಯಾ ಮದುವೆಯಾಗುತ್ತಾಳೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಆಲಿಯಾ ವಿಲನ್. ನಟಿ ಶಿಖಾ ಸಿಂಗ್ 2007ರಿಂದ ಇಲ್ಲಿಯವರೆಗೆ ಹಲವು ಧಾರಾವಾಹಿ, ಧಾರಾವಾಹಿ ಸಿರೀಸ್‌ನಲ್ಲಿ ಭಾಗಿಯಾಗಿದ್ದಾರೆ. ‘ಮಹಾಭಾರತ’ ಧಾರಾವಾಹಿಯಲ್ಲಿ ಶಿಖಂಡಿ ಪಾತ್ರಕ್ಕೆ ಶಿಖಾ ಬಣ್ಣ ಹಚ್ಚಿದ್ದು ಮಾತ್ರ ನಿಜಕ್ಕೂ ಹೆಗ್ಗಳಿಕೆಯ ವಿಷಯ.

ಶಿಖಾ ನಟಿಸಿದ ಕೆಲ ಧಾರಾವಾಹಿಗಳು ಇವು
‘ಲೆಫ್ಟ್‌ & ರೈಟ್’, ‘ಜುಬ್ಲೀ ಕಾಮಿಡಿ ಸರ್ಕಸ್’, ‘ಮೇರಿ ಡಾಲಿ ತೇರೆ ಅಂಗನಾ’, ‘ಉತ್ತರಣ್’, ‘ಫುಲ್ವಾ’, ‘ಸಸುರಾಲ್ ಸಿಮರ್ಲ್ ಕಾ’, ‘ಚಂದ್ರ್ ನಂದಿನಿ’ ಧಾರಾವಾಹಿಗಳಲ್ಲೂ ಶಿಖಾ ಸಿಂಗ್ ನಟಿಸಿದ್ದರು.

Comments are closed.