ಕರ್ನಾಟಕ

ರಾಜ್ಯದಲ್ಲಿ 37 ಹೊಸ ಕೊರೋನಾ ಪ್ರಕರಣಗಳು​ ಪತ್ತೆ: ಇಬ್ಬರು ಸಾವು

Pinterest LinkedIn Tumblr


ಬೆಂಗಳೂರು(ಮೇ.04): ಕಳೆದ 24 ಗಂಟೆಗಳಲ್ಲಿ 37 ಹೊಸ ಕೋವಿಡ್​​​-19 ಪಾಸಿಟಿವ್​ ಕೇಸುಗಳು ಪತ್ತೆಯಾದ ಪರಿಣಾಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 651ಕ್ಕೇರಿಕೆ ಆಗಿದೆ. ಇಂದು ದಾವಣಗೆರೆ 22, ಬೀದರ್​ 7, ಮಂಡ್ಯ 2, ಕಲ್ಬುರ್ಗಿ 2, ಚಿಕ್ಕಬಳ್ಳಾಪುರ 1, ಹಾವೇರಿ 1, ವಿಜಯಪುರ 1, ಬೆಂಗಳೂರಿನಲ್ಲಿ ಒಂದು ಕೊರೋನಾ ಕೇಸ್​ ದಾಖಲಾಗಿದೆ. ಜತೆಗೆ ಈ ಮಾರಕ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಮೃತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಲ್ಲಿ ತಿಳಿದು ಬಂದಿದೆ.

ಇನ್ನು, ಕಲಬುರ್ಗಿ ಮೂಲದ 56 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ದಾವಣಗೆರೆಯ 48 ವರ್ಷದ ನಿವಾಸಿ ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಒಟ್ಟು 651 ಸೋಂಕಿತರ ಪೈಕಿ 321 ಜನ ಗುಣಮುಖರಾಗಿದ್ದಾರೆ. ಹಾಗಾಗಿ ಸದ್ಯ 302 ಆ್ಯಕ್ಟೀವ್​​ ಕೇಸುಗಳು ಇವೆ.

ರಾಜ್ಯದ ಒಟ್ಟು 295 ಕೊರೋನಾ ಆಕ್ಟಿವ್ ಪ್ರಕರಣಗಳ ಪಟ್ಟಿ ಹೀಗಿದೆ:

ಬೆಂಗಳೂರು: 68
ಬೆಳಗಾವಿ: 44
ಕಲಬುರ್ಗಿ: 36
ವಿಜಯಪುರ: 26
ಬಾಗಲಕೋಟೆ: 22
ಮಂಡ್ಯ: 21
ದಕ್ಷಿಣ ಕನ್ನಡ: 9
ದಾವಣಗೆರೆ: 28
ಚಿಕ್ಕಬಳ್ಳಾಪುರ: 7
ಧಾರವಾಡ: 4
ಬಳ್ಳಾರಿ: 5
ತುಮಕೂರು: 4
ಗದಗ: 3
ಇತರೆ: 2

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,074 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈವರೆಗೂ 11,706 ಸೋಂಕಿಯರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಮಾರಕ ಸೋಂಕಿನಿಂದ ಗುಣವಾಗುವ ಪ್ರಮಾಣ ಶೇ.27.52ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 42,533 ಪ್ರಕರಣಗಳು ಈವರೆಗೆ ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಮಾಹಿತಿ ನೀಡಿದ್ದಾರೆ.

Comments are closed.