ಮನೋರಂಜನೆ

ಚಿತ್ರ ಸೋತಿದ್ದಕ್ಕೆ ಮದುವೆ ಕುರಿತು ನಿರಾಸಕ್ತಿ ತೋರಿದ ಜನಪ್ರಿಯ ನಟ!

Pinterest LinkedIn Tumblr


ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ವರುಣ್‌ ಧವನ್‌ ಮದುವೆ ತಯಾರಿ ನಡೆಯಬೇಕಿತ್ತು. ಬಹುಕಾಲದ ಗೆಳತಿ ನತಾಶಾ ದಲಾಲ್‌ ಜೊತೆ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಸದ್ಯಕ್ಕೆ ಮದುವೆ ಮುಂದೂಡಲು ವರುಣ್ ನಿರ್ಧರಿಸಿದ್ದಾರಂತೆ.

ಇತ್ತೀಚೆಗೆ ವರುಣ್‌ ನಟಿಸಿದ ‘ಸ್ಟ್ರೀಟ್‌ ಡಾನ್ಸರ್‌ 3D’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್‌ ಮಾಡಲಿಲ್ಲ. ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಈ ನೃತ್ಯ ಪ್ರಧಾನ ಚಿತ್ರಕ್ಕೆ ನಿರ್ದೇಶನ ಮಾಡಿದ್ದರೂ ಸಹ, ಅದು ಜನಮನ ಗೆಲ್ಲುವಲ್ಲಿ ಯಶಸ್ವಿ ಆಗಲ್ಲಿ. ಭಾರಿ ಬಜೆಟ್‌ನಲ್ಲಿ ತಯಾರಾದ ‘ಸ್ಟ್ರೀಟ್‌ ಡಾನ್ಸರ್‌ 3D’ ಚಿತ್ರ ಭಾರತೀಯ ಮಾರುಕಟ್ಟೆಯಲ್ಲಿ ಈವರೆಗೂ ಗಳಿಸಿರುವುದು 68 ಕೋಟಿ ರೂ. ಮಾತ್ರ. ನೂರು ಕೋಟಿ ರೂ. ಕಲೆಕ್ಷನ್‌ ಮಾಡುವುದು ಕಷ್ಟ ಎಂಬುದು ಗೊತ್ತಾಗುತ್ತಿದ್ದಂತೆಯೇ ವರುಣ್‌ ಬೇಸರಪಟ್ಟುಕೊಂಡಿದ್ದಾರೆ.

ಒಂದು ವೇಳೆ ಸಿನಿಮಾ ಗೆದ್ದಿದ್ದರೆ, ಇದೇ ವರ್ಷ ಮೇ ಅಥವಾ ಏಪ್ರಿಲ್‌ ತಿಂಗಳಲ್ಲಿ ವರುಣ್‌ ಮತ್ತು ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಆದರೆ ಸದ್ಯಕ್ಕೆ ವೃತ್ತಿಜೀವನ ಹಳಿ ತಪ್ಪಿರುವುದರಿಂದ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ವರುಣ್‌ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಮದುವೆ ಬಗ್ಗೆ ಅವಸರ ಮಾಡುವುದು ಬೇಡ ಎಂದು ಕುಟುಂಬದ ಸದಸ್ಯರಿಗೆ ಹೇಳಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಅಂದಹಾಗೆ, ವರುಣ್‌ ಮತ್ತು ನತಾಶಾ ಬಹುಕಾಲದ ಸ್ನೇಹಿತರು. ಆ ಗೆಳತನ ನಂತರ ಪ್ರೀತಿಗೆ ತಿರುಗಿತು. ವರುಣ್‌ ಬಾಲಿವುಡ್‌ಗೆ ಕಾಲಿಡುವುದಕ್ಕೂ ಮುನ್ನವೇ ಅವರು ನತಾಶಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಅನೇಕ ಪಾರ್ಟಿ, ಸಮಾರಂಭಗಳಲ್ಲಿ ನತಾಶಾ-ವರುಣ್‌ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

Comments are closed.