ಕರ್ನಾಟಕ

ಸ್ವ ಘೋಷಿತ ದೇವಮಾನ ನಿತ್ಯಾನಂದ ಜಾಮೀನು ರದ್ದು

Pinterest LinkedIn Tumblr


ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವ ಘೋಷಿತ ದೇವಮಾನ, ಬಿಡದಿಯ ನಿತ್ಯಾನಂದ ಸ್ವಾಮಿಗೆ ನೀಡಲಾಗಿದ್ದ ಜಾಮೀನನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಆರೋಪಿ ನಿತ್ಯಾನಂದಗೆ2010ರಲ್ಲಿ ಜಾಮೀನು ಮಂಜೂರಾಗಿತ್ತು. ಅದನ್ನು ರದ್ದುಪಡಿಸುವಂತೆ ದೂರುದಾರ ಲೆನಿನ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ನೇತೃತ್ವದ ನ್ಯಾಯಪೀಠ, ಜಾಮೀನು ರದ್ದುಗೊಳಿಸಿ ಆದೇಶ ನೀಡಿದರು.

ಅತ್ಯಾಚಾರ ಆರೋಪ ಹೊತ್ತಿರುವ ನಿತ್ಯಾನಂದ ಪಾಸ್‌ಪೋರ್ಟ್‌ ರದ್ದಾಗಿದೆ. ಆದರೂ ಆತ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ನಿರಂತರ ಗೈರು ಹಾಜರಾಗಿದ್ದಾರೆ. ಹೀಗಾಗಿ ಜಾಮೀನು ರದ್ದುಗೊಳಿಸಬೇಕು ಎಂದು ದೂರುದಾರರು ವಾದ ಮಂಡಿಸಿದ್ದರು.

ಪ್ರಕರಣದಲ್ಲಿ 2ನೇ ಆರೋಪಿಯಾಗಿರುವವರು ಕೂಡ ವಿಚಾರಣೆಗೆ ಹಾಜರಾಗಿಲ್ಲ ಎಂದು ವಾದಿಸಲಾಗಿತ್ತು.

ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ, ನಿತ್ಯಾನಂದಗೆ ಮಂಜೂರಾಗಿದ್ದ ಜಾಮೀನನ್ನು ರದ್ದಗೊಳಿಸಿ ಆದೇಶ ಹೊರಡಿಸಿದೆ

Comments are closed.