ರಾಷ್ಟ್ರೀಯ

5 ಕೋಟಿ ರೈತರಿಗೆ ದೊರಕದ ಪ್ರಧಾನ ಮಂತ್ರಿ ಕಿಸಾನ್‌ ಸ್ಕೀಮ್‌ 3ನೇ ಕಂತಿನ ಹಣ

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪಿಎಂ – ಕಿಸಾನ್‌ ಸ್ಕೀಮ್‌ ಅಡಿಯಲ್ಲಿ 5 ಕೋಟಿಗೂ ಹೆಚ್ಚು ರೈತರು ಇನ್ನೂ ಮೂರನೇ ಕಂತಿನ ಹಣವನ್ನು ಪಡೆದಿಲ್ಲ ಎನ್ನುವ ಅಂಕಿ ಅಂಶವನ್ನು ಕೃಷಿ ಮತ್ತು ರೈತ ನಿಧಿ ಸಚಿವಾಲಯ ನೀಡಿದೆ.

ಆರ್‌ಟಿಐ ಪ್ರಶ್ನೆಯೊಂದಕ್ಕೆ ಸಚಿವಾಲಯ ಈ ಮಾಹಿತಿ ನೀಡಿದೆ. ರೈತರಿಗೆ ವಾರ್ಷಿಕ 6,000 ರೂ. ನೆರವು (ಒಂದು ಕಂತಿನಲ್ಲಿ 2,000 ರೂ. ವಿತರಣೆ) ನೀಡುವ ಪಿಎಂ-ಕಿಸಾನ್‌ ಯೋಜನೆಯನ್ವಯ ಸರಕಾರವು ಬಾಕಿಯನ್ನು ಉಳಿಸಿಕೊಂಡಿದೆ. ಸರಕಾರದ ದಾಖಲೆಗಳು ಹೇಳುವಂತೆ 2.51 ಕೋಟಿ ರೈತರಿಗೆ ಎರಡನೇ ಕಂತೇ ಇನ್ನೂ ತಲುಪಿಲ್ಲ. ಮೂರನೇ ಕಂತಿನ ಹಣವನ್ನು 5.16 ಕೋಟಿ ರೈತರಿಗೆ ಸರಕಾರ ಇನ್ನೂ ವಿತರಣೆ ಮಾಡಿಲ್ಲ.

2018ರ ಡಿ.1ರಿಂದ ಯೋಜನೆ ಜಾರಿಗೆ ಬಂದಿದೆ. 2018ರ ಡಿಸೆಂಬರ್‌ನಿಂದ 2019ರ ನವೆಂಬರ್‌ ತನಕ ದೇಶದ 9 ಕೋಟಿ ರೈತರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. 7.62 ಕೋಟಿ ಅಥವಾ ಶೇ. 84 ರಷ್ಟು ರೈತರು ಮೊದಲ ಕಂತಿನ ಹಣವನ್ನು ಪಡೆದಿದ್ದಾರೆ. 2018ರ ಡಿಸೆಂಬರ್‌ ಮತ್ತು 2019ರ ಮಾರ್ಚ್‌ ನಡುವೆ 4.74 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಕಂತಿನಲ್ಲಿ 4.22 ಕೋಟಿ ರೈತರು, ಎರಡನೇ ಕಂತನ್ನು 4.02 ಕೋಟಿ ಮತ್ತು ಮೂರನೇ ಕಂತನ್ನು 3.85 ಕೋಟಿ ರೈತರಿಗೆ ವಿತರಿಸಲಾಗಿದೆ.

Comments are closed.