
ಪಣಜಿ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ಸೆಲ್ಫಿ ತೆಗೆಯುತ್ತಿದ್ದ ಅಭಿಮಾನಿಯ ಫೋನ್ ಕಿತ್ತುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇಂದು ತಮ್ಮ ಚಿತ್ರ ರಾಧೆ ಸಿನಿಮಾಗಾಗಿ ಗೋವಾಗೆ ಹೋಗಿದ್ದ ಸಲ್ಮಾನ್, ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಿದ್ದಾಗ ಅಭಿಮಾನಿಯೋರ್ವ ಸಲ್ಲು ಮುಂದೆ ಬಂದು ಸಲ್ಫಿ ತೆಗೆಯಲು ಮುಂದಾಗಿದ್ದಾನೆ. ಆಗ ಸಲ್ಮಾನ್ ಖಾನ್ ಅವರು ಅಭಿಮಾನಿಯ ಫೋನ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ.
ಸಲ್ಮಾನ್ ಖಾನ್ ಅವರು ಫೋನ್ ಕಿತ್ತುಕೊಂಡಿರುವ ದೃಶ್ಯವನ್ನು ಮತ್ತೊಬ್ಬ ಅಭಿಮಾನಿ ವಿಡಿಯೋ ಮಾಡಿದ್ದು, 7 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಅಭಿಮಾನಿಯ ಫೋನ್ ಅನ್ನು ಕಿತ್ತುಕೊಂಡ ಸಲ್ಮಾನ್ ಖಾನ್, ಆತನ ಫೋನ್ ನನ್ನು ಕೈಯಲ್ಲೇ ಹಿಡಿದುಕೊಂಡು ವಿಮಾನ ನಿಲ್ದಾಣದಿಂದ ಹೊರ ಹೋಗಿರುವುದನ್ನು ನಾವು ನೋಡಬಹುದು.
ಈ ವಿಡಿಯೋ ನೋಡಿರುವ ನೆಟ್ಟಿಗರು ಸಲ್ಮಾನ್ ಖಾನ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಅವರು ಕೇವಲ ಚಿತ್ರನಟ ನೀವು ಆತನ್ನು ನೀವು ಯಾಕೆ ದೇವರು ರೀತಿ ನೋಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇತ್ತೀಚೆಗೆ ಅವರು ಚಿತ್ರಗಳು ಹೇಳಿಕೊಳ್ಳುವಷ್ಟು ಹಿಟ್ ಆಗುತ್ತಿಲ್ಲ. ಆದ್ದರಿಂದ ಈ ರೀತಿ ಆಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲ ನಟ್ಟಿಗರು ಕಿತ್ತುಕೊಂಡ ಫೋನ್ ಅನ್ನು ವಾಪಸ್ ಕೊಟ್ಟರಾ ಎಂದು ಕೇಳಿದ್ದಾರೆ.
ಈ ಹಿಂದೆಯೂ ಕೂಡ ಸಲ್ಮಾನ್ ಖಾನ್ ಅವರು, ಮಕ್ಕಳ ಜೊತೆ ಗರಂ ಆಗಿ ವರ್ತಿಸಿದ ತನ್ನ ಸೆಕ್ಯೂರಿಟಿ ಗಾರ್ಡ್ಗೆ ಕಪಾಳಕ್ಕೆ ಹೊಡೆದು ಸುದ್ದಿಯಾಗಿದ್ದರು. ತಮ್ಮ ಭಾರತ್ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ಗೆ ಎಂದು ಸಲ್ಮಾನ್ ಖಾನ್ ಹೋಗುತ್ತಿದ್ದಾಗ ಸೆಕ್ಯೂರಿಟಿ ಅವರಿಗೆ ಜಾಗಮಾಡಿಕೊಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿಂದ ಮಕ್ಕಳ ಜೊತೆ ಸೆಕ್ಯೂರಿಟಿ ಗಾರ್ಡ್ ಸರಿಯಾಗಿ ವರ್ತಿಸಲಿಲ್ಲ ಎಂದು ಕಪಾಳಕ್ಕೆ ಹೊಡೆದಿದ್ದರು.
Comments are closed.