ಕರ್ನಾಟಕ

ಟೀ ವಿಷಯಕ್ಕೆ ಪ್ರೇಮಿಗಳ ಜಗಳ – ಅತ್ಮಹತ್ಯೆ ಮಾಡಿಕೊಂಡ ಪ್ರೇಯಸಿ

Pinterest LinkedIn Tumblr


ತುಮಕೂರು: ಟೀ ಮಾಡುವ ವಿಚಾರದಲ್ಲಿ ಪ್ರೇಮಿಗಳ ನಡುವೆ ಜಗಳ ನಡೆದು ಮನನೊಂದ ಪ್ರೇಯಸಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಅಶ್ವಿನಿ (25) ನೇಣು ಹಾಕಿಕೊಂಡ ಪ್ರೇಯಸಿ. 2 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ತನ್ನ ಪ್ರಿಯಕರ ಪ್ರಭಾಕರ್ ಜೊತೆ ಲ್ಯಾಬ್‍ನಲ್ಲಿ ಟೀ ಮಾಡುವ ವಿಚಾರಕ್ಕೆ ಜಗಳ ಮಾಡಿಕೊಂಡು, ಸಿರಾ ತಾಲೂಕು ಕಳ್ಳಂಬೆಳ್ಳಗೆ ಬಂದು ಕೋಳಿ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಶ್ವಿನಿ ಬೆಂಗಳೂರು ಸಂಜಯ ನಗರದ ಮಾರತಹಳ್ಳಿ ನಿವಾಸಿಯಾಗಿದ್ದು, ವಿಬೂತಿಪೂರಂನ ಪ್ರಭಾತ್ ಡಯಾಗ್ನಸಿಸ್ ಲ್ಯಾಬ್‍ನಲ್ಲಿ ಕೆಲಮಾಡುತಿದ್ದಳು. ಪ್ರಭಾತ್ ಡಯಾಗ್ನಸಿಸ್ ಲ್ಯಾಬ್‍ನ ಮಾಲೀಕ ಪ್ರಭಾಕರ್ ನನ್ನು 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಸೋಮವಾರ ಲ್ಯಾಬ್‍ನಲ್ಲಿ ಟೀ ಮಾಡುವ ವಿಚಾರವಾಗಿ ಪ್ರಭಾಕರ್ ಮತ್ತು ಅಶ್ವಿನಿ ಜಗಳಾವಾಡಿದ್ದಾರೆ. ನಂತರ ರಾತ್ರಿ ಅಶ್ವಿನಿ ಡಿಯೋ ಬೈಕಿನಲ್ಲಿ ಬೆಂಗಳೂರಿನಿಂದ ಬಂದು ಕೋಳಿ ಅಂಗಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನುವ ವಿಚಾರ ತಿಳಿದು ಬಂದಿದೆ.

ಈ ಸಂಬಂಧ ಕಳ್ಳಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.